ಕೊಡಗಿನ ಮಲ್ಲಳ್ಳಿ ಜಲಪಾತ ಧುಮ್ಮುಕ್ಕಿತ್ತಿರುವ ದೃಶ್ಯ ನಯನಮನೋಹರ!
ಹಸಿರು ಮೈ ಹೊದ್ದಿರುವ ಇಳುಕಲು ಪ್ರದೇಶದಿಂದ ಹಾಲಿನ ನೊರೆಯಂತೆ ಧುಮ್ಮುಕ್ಕುತ್ತಿರುವ ನೀರು ನೋಡುಗರಲ್ಲಿ ಅನಿರ್ವಚನೀಯ ಭಾವ ಮೂಡಿಸುವುದು ಮಾತ್ರ ನಿಶ್ಚಿತ.
ಕೊಡಗು: ಮಳೆಗಾಲಗಳಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು (waterfalls) ನೋಡುವುದೇ ಒಂದು ರೋಮಾಂಚಕ (exciting) ಹಾಗೂ ಸ್ಮರಣೀಯ (memorable) ಅನುಭವ ಮಾರಾಯ್ರೇ. ನಿಮಗಿಲ್ಲಿ ನಾವು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ತೋರಿಸುತ್ತಿದ್ದೇವೆ. ಎಂಥ ರಮಣೀಯ ದೃಶ್ಯವಿದು! ಹಸಿರು ಮೈ ಹೊದ್ದಿರುವ ಇಳುಕಲು ಪ್ರದೇಶದಿಂದ ಹಾಲಿನ ನೊರೆಯಂತೆ ಧುಮ್ಮುಕ್ಕುತ್ತಿರುವ ನೀರು ನೋಡುಗರಲ್ಲಿ ಅನಿರ್ವಚನೀಯ ಭಾವ ಮೂಡಿಸುವುದು ಮಾತ್ರ ನಿಶ್ಚಿತ.
