ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್

Updated on: Dec 23, 2025 | 2:57 PM

ಪ್ರೇಯಸಿಗೆ ವಂಚಿಸಿ ಬೇರೆ ಯುವತಿ ಜತೆ ಮದುವೆಯಾಗಿದ್ದ ಶರತ್​ ಎನ್ನುವಾತನ್ನು ಪೊಲೀಸರು ಬಂಧಿಸಿದ್ದು, ಸದ್ಯ ಕೋರ್ಟ್​ ನವವಿವಾಹಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರಿನ (Chikkamagaluru) ಶರತ್ ಎನ್ನುವಾತ ಯುವತಿಯನ್ನು ಪ್ರೀತಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ಆಕೆಯನ್ನು ಲೈಂಗಿಕವಾಗಿ ಸಹ ಬಳಿಸಿಕೊಂಡಿದ್ದ. ಆದ್ರೆ, ಏಕಾಏಕಿ ಶರತ್ ಇದೇ ಡಿಸೆಂಬರ್ 14ರಂದು ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣಮಂಟಪದಲ್ಲಿ ಬೇರೊಂದು ಯುವತಿ ಜತೆ ಮದುವೆಯಾಗಿದ್ದ.

ಚಿಕ್ಕಮಗಳೂರು, (ಡಿಸೆಂಬರ್ 23): ಪ್ರೇಯಸಿಗೆ ವಂಚಿಸಿ ಬೇರೆ ಯುವತಿ ಜತೆ ಮದುವೆಯಾಗಿದ್ದ ಶರತ್​ ಎನ್ನುವಾತನ್ನು ಪೊಲೀಸರು ಬಂಧಿಸಿದ್ದು, ಸದ್ಯ ಕೋರ್ಟ್​ ನವವಿವಾಹಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರಿನ (Chikkamagaluru) ಶರತ್ ಎನ್ನುವಾತ ಯುವತಿಯನ್ನು ಪ್ರೀತಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ಆಕೆಯನ್ನು ಲೈಂಗಿಕವಾಗಿ ಸಹ ಬಳಿಸಿಕೊಂಡಿದ್ದ. ಆದ್ರೆ, ಏಕಾಏಕಿ ಶರತ್ ಇದೇ ಡಿಸೆಂಬರ್ 14ರಂದು ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣಮಂಟಪದಲ್ಲಿ ಬೇರೊಂದು ಯುವತಿ ಜತೆ ಮದುವೆಯಾಗಿದ್ದ. ಪ್ರಿಯಕರನ ಮದುವೆ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಸಿ ಮದುವೆ ಮಂಟಪಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ, ಯುವತಿ ವಿರೋಧದ ನಡುವೆಯೂ ಶರತ್, ಮನೆಯವರು ನೋಡಿದ್ದ ಯುವತಿ ಕುತ್ತಿಗೆಗೆ ತಾಳಿ ಕಟ್ಟಿಬಿಟ್ಟಿದ್ದ.

ಇದರಿಂದ ಕಂಗಾಲಾದ ಯುವತಿ, ಪ್ರಿಯಕರ ಶರತ್ ಸೇರಿದಂತೆ 7 ಜನರ ವಿರುದ್ಧ ಹಲ್ಲೆ ಆರೋಪ ದೂರು ದಾಖಲಿಸಿದ್ದಳು. ಈ ದೂರಿನ ಮೇರೆಗೆ ಚಿಕ್ಕಮಗಳೂರಿನ ಡಿಸಿಆರ್​ಇ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ನಿನ್ನೆ (ಡಿಸೆಂಬರ್ 22) ರಾತ್ರಿ ನವವಿವಾಹಿತ ಶರತ್​​ನನ್ನು ಬಂಧಿಸಿ ಕೋರ್ಟ್​​ಗೆ ಹಾಜರುಪಡಿಸಿದ್ದು,ಇದೀಗ ಕೋರ್ಟ್ ಶರತ್​​ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರೇಯಿಸಿ ಜೊತೆ ಸುತ್ತಾಡಿ ತೀಟೆ ತೀರಿಸಿಕೊಂಡು ಮೋಸ ಮಾಡಿದ್ದ ಶರತ್ ಇದೀಗ ಜೈಲು ಪಾಲಾಗಿದ್ದಾನೆ.

ಇದನ್ನೂ ನೋಡಿ: ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

Published on: Dec 23, 2025 02:48 PM