ಬೆಳಗಾವಿ: ಮಗು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಮನೆ ಮಾಲೀಕನ ಮಾರಣಾಂತಿಕ ಹಲ್ಲೆ!

|

Updated on: Jan 03, 2024 | 11:34 AM

ಸುಗಂಧಾ, ಒಂದು ಮಗುವಿನ ನೈಸರ್ಗಿಕ ಕರೆ ತೀರಿಸಲು ಅಂಗನವಾಡಿ ಕೇಂದ್ರ ಪಕ್ಕ ಕರೆದೊಯ್ದಾಗ ಆ ಮುಗ್ಧ ಮಗು ಅಲ್ಲಿದ್ದ ಮನೆಯ ಅಂಗಳದಲ್ಲಿದ್ದ ಹೂ ಕಿತ್ತಿದೆ. ಅದೇ ಕಾರಣಕ್ಕೆ ರಾಕ್ಷಸನಾದ ಮನೆ ಮಾಲೀಕ ಕಲ್ಯಾಣಿ ಮೋರೆ, ಸುಗಂಧಾ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು (crime rate) ಹೆಚ್ಚುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಸೋಮವಾರ ಮಧ್ಯಾಹ್ನ ಬೆಳಗಾವಿ ತಾಲ್ಲೂಕಿನ ಬಸುರ್ತೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೊಬ್ಬರ (Anganwadi worker ) ಮೇಲೆ ನರರೂಪಿ ರಾಕ್ಷಸನೊಬ್ಬ ಅಕ್ಷರಶಃ ಒಂದು ಕ್ಷುಲ್ಲಕ ಕಾರಣಕ್ಕೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾನೆ. ಮಹಿಳೆಯನ್ನು ಸುಗಂಧಾ ಮೋರೆ (Sighanda More) (50) ಎಂದು ಗುರುತಿಸಲಾಗಿದ್ದು, ತಾಲ್ಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಸ್ಥಳೀಯರೊಬ್ಬರು ಬೆಳಗಾವಿಯ ಟಿವಿ9 ಕನ್ನಡ ವಾಹಿನಿಯ ವರದಿಗಾರನಿಗೆ ಭೀಕರ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಅವರು ಹೇಳುವ ಹಾಗೆ; ಸುಗಂಧಾ, ಒಂದು ಮಗುವಿನ ನೈಸರ್ಗಿಕ ಕರೆ ತೀರಿಸಲು ಅಂಗನವಾಡಿ ಕೇಂದ್ರ ಪಕ್ಕ ಕರೆದೊಯ್ದಾಗ ಆ ಮುಗ್ಧ ಮಗು ಅಲ್ಲಿದ್ದ ಮನೆಯ ಅಂಗಳದಲ್ಲಿದ್ದ ಹೂ ಕಿತ್ತಿದೆ. ಅದೇ ಕಾರಣಕ್ಕೆ ರಾಕ್ಷಸನಾದ ಮನೆ ಮಾಲೀಕ ಕಲ್ಯಾಣಿ ಮೋರೆ, ಸುಗಂಧಾ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಜಿಲ್ಲೆಯವರೇ ಆಗಿರುವ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕಲ್ಯಾಣಿಯನ್ನು ಬಂಧಿಸಿ ಜೈಲಿಗಟ್ಟಬೇಕು ಮತ್ತು ಯಾವುದೇ ರೀತಿಯ ಸುರಕ್ಷೆ, ಭದ್ರತೆ ಇಲ್ಲದೆ ಆತಂಕದಲ್ಲಿ ದುಡಿಯುತ್ತಿರುವ ಅಂಗನವಾಡಿ ಸಹಾಯಕಿಯರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸ್ಥಳೀಯರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ