Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆಯನ್ನೇ ತೆಗೆದುಕೊಳ್ಳದೆ ದುಡಿದ ಅಂಗನವಾಡಿ ಕಾರ್ಯಕರ್ತೆ ಸಾವಿಗಿಲ್ಲವಾ ಪರಿಹಾರ?

ಬಾಗಲಕೋಟೆ: ಕೊವಿಡ್ ವಾರಿಯರ್ ಅಂಗನವಾಡಿ ಕಾರ್ಯಕರ್ತೆ ಸಾವಿಗೆ ಬೆಲೆ ಇಲ್ಲವೆ? ಅಂಗನವಾಡಿ ಕುಟುಂಬದ ಕಣ್ಣೀರಿಗೆ ಯಾರು ಹೊಣೆ? ಕೊವಿಡ್ ಕರ್ತವ್ಯದ ಮೇಲೆ ಹೊರಟ ವೇಳೆ ಬೈಕ್‌ನಿಂದ ಬಿದ್ದು ಪ್ರಭಾವತಿ ಪೂಜಾರ(58) ಮೃತಪಟ್ಟಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು. ಮೇ 18ರಂದು ಬೈಕ್​ನಿಂದ ಬಿದ್ದು ಪ್ರಭಾವತಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಮೇ 20ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆ ಮಕ್ಕಳು ತಾಯಿ ಇಲ್ಲದ […]

ರಜೆಯನ್ನೇ ತೆಗೆದುಕೊಳ್ಳದೆ ದುಡಿದ ಅಂಗನವಾಡಿ ಕಾರ್ಯಕರ್ತೆ ಸಾವಿಗಿಲ್ಲವಾ ಪರಿಹಾರ?
Follow us
ಸಾಧು ಶ್ರೀನಾಥ್​
| Updated By:

Updated on: May 22, 2020 | 2:48 PM

ಬಾಗಲಕೋಟೆ: ಕೊವಿಡ್ ವಾರಿಯರ್ ಅಂಗನವಾಡಿ ಕಾರ್ಯಕರ್ತೆ ಸಾವಿಗೆ ಬೆಲೆ ಇಲ್ಲವೆ? ಅಂಗನವಾಡಿ ಕುಟುಂಬದ ಕಣ್ಣೀರಿಗೆ ಯಾರು ಹೊಣೆ? ಕೊವಿಡ್ ಕರ್ತವ್ಯದ ಮೇಲೆ ಹೊರಟ ವೇಳೆ ಬೈಕ್‌ನಿಂದ ಬಿದ್ದು ಪ್ರಭಾವತಿ ಪೂಜಾರ(58) ಮೃತಪಟ್ಟಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು.

ಮೇ 18ರಂದು ಬೈಕ್​ನಿಂದ ಬಿದ್ದು ಪ್ರಭಾವತಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಮೇ 20ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ. ಕೊವಿಡ್​ ಕರ್ತವ್ಯದಿಂದ ತಾಯಿ ಬಲಿಯಾಗಿದ್ದು, ದಿಕ್ಕು ತೋಚದೆ ನಾಲ್ಕು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.

ಅಪಘಾತದಲ್ಲಿ ಮೃತಪಟ್ರೆ ವಿಮೆ ಅನ್ವಯವಾಗಲ್ವಂತೆ: ತಾಳಿಯ ಚಿನ್ನದ ಮುತ್ತು ಮಾರಿ ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದರು. ಆದ್ರೆ ಈಗ ಅಪಘಾತದಲ್ಲಿ ಮೃತಪಟ್ಟಿರುವ ಕಾರಣ ಕೊವಿಡ್ ವಾರಿಯರ್ಸ್ ವಿಮೆ ಅನ್ವಯವಾಗೋದಿಲ್ಲ ಎಂದು ಹೇಳುತ್ತಿದ್ದಾರೆ. ಕೊರೊನಾ ತಗುಲಿ ಮೃತಪಟ್ಟರೆ ಮಾತ್ರ 30 ಲಕ್ಷ ವಿಮೆ ಹಣ ಎಂಬ ನಿಯಮ ಕುಟುಂಬಕ್ಕೆ ನಿರಾಶೆ ಮೂಡಿಸಿದೆ.

ಒಂದು ದಿನವೂ ರಜೆ ಪಡೆಯದೆ ದುಡಿದ ಅಂಗನವಾಡಿ ಕಾರ್ಯಕರ್ತೆ ಸಾವಿಗೆ ಪರಿಹಾರ ಇಲ್ವಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಪಘಾತ ಪರಿಹಾರ 50 ಸಾವಿರ, ಎನ್​ಪಿಎಸ್ ಇನ್ಶೂರೆನ್ಸ್​ 27 ಸಾವಿರ ರೂಪಾಯಿ ಮಾತ್ರ. ಹಾಗಾದ್ರೆ ಕೊವಿಡ್​ ವಾರಿಯರ್ಸ್ ವಿಮೆ ಯಾವ ಪುರುಷಾರ್ಥಕ್ಕೆ? ಬಸ್ ಇಲ್ಲದ ಹಿನ್ನೆಲೆಯಲ್ಲಿ ಬೈಕ್ ಮೇಲೆ ಡ್ರಾಪ್ ಪಡೆದ ವೇಳೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ