ವಿಶೇಷ ಚೇತನ ಪತ್ನಿಯನ್ನು ಮಗುವಿನಂತೆ ಎತ್ತಿಕೊಂಡು ಹೋಗಿ ಹಾಸನಾಂಬೆ ದೇವಿಯ ದರ್ಶನ ಮಾಡಿಸಿದ ಪತಿ
ಹಾಸನಾಂಬೆ ದರ್ಶನೋತ್ಸವ ಭದ್ರತೆಗೆ ನಿಯೋಜಿಸಲ್ಪಟ್ಟಿರುವ ಪೊಲೀಸರು ಗೌರಮ್ಮರನ್ನು ಹೊತ್ತ ನಾಗರಾಜರನ್ನು ನೇರವಾಗಿ ಗರ್ಭಗುಡಿಗೆ ಹೋಗುವ ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಹಾಸನ: ಹೊಳೆನರಸೀಪುರ ತಾಲ್ಲೂಕಿನ ಬೀಚನಹಳ್ಳಿಯ ನಾಗರಾಜ್ (Nagaraj) ಅವರಿಗೆ ತಮ್ಮ ಪತ್ನಿ ಗೌರಮ್ಮ (Gouramma) ಮೇಲೆ ಅಪಾರ ಪ್ರೀತಿ ಮತ್ತು ಗೌರವ ಮಾರಾಯ್ರೇ. ಈ ವಿಡಿಯೋ ನಿಮಗೆ ನೋಡಿದರೆ ನಾವು ಹೇಳುವುದು ನಿಮಗೆ ಅರ್ಥವಾಗುತ್ತದೆ. ವಿಶೇಷ ಚೇತನರಾಗಿರುವ ಗೌರಮ್ಮನ ಹಾಸನಾಂಬೆ ದೇವಿಯ (Hasanambe Goddess) ದರ್ಶನ ಮಾಡಬೇಕೆನ್ನುವ ಬಹುದಿನದ ಆಸೆಯನ್ನು ನಾಗರಾಜ್ ಹೀಗೆ ಪೂರೈಸಿದ್ದಾರೆ. ಪತ್ನಿಯನ್ನು ಎತ್ತಿಕೊಂಡೇ ಅವರು ದೇವಾಲಯದೊಳಗೆ ಹೋಗಿದ್ದಾರೆ. ಹಾಸನಾಂಬೆ ದರ್ಶನೋತ್ಸವ ಭದ್ರತೆಗೆ ನಿಯೋಜಿಸಲ್ಪಟ್ಟಿರುವ ಪೊಲೀಸರು ಗೌರಮ್ಮರನ್ನು ಹೊತ್ತ ನಾಗರಾಜರನ್ನು ನೇರವಾಗಿ ಗರ್ಭಗುಡಿಗೆ ಹೋಗುವ ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.