ಹಳೇ ಚಪ್ಪಲಿ ಬಿಟ್ಟು ದುಬಾರಿ ಬೆಲೆ ಚಪ್ಪಲಿ ಕಳ್ಳತನ, ವಿಡಿಯೋನಲ್ಲಿ ನೋಡಿ ಖದೀಮನ ಐಡಿಯಾ
ಕಳ್ಳರಲ್ಲಿ ನಾನಾ ಕಳ್ಳರು ಇದ್ದಾರೆ. ಕೆಲವರು ಒಂದೇ ಸಲಕ್ಕೆ ಶ್ರೀಮಂತರಾಗಬೇಕೆಂದು ಮನೆಗಳ್ಳತನ ಮಾಡುತ್ತಿದ್ದರೆ, ಇನ್ನೂ ಕೆಲವರು ದೊಡ್ಡ ಅಂಗಡಿಗಳನ್ನ ಟಾರ್ಗೆಟ್ ಮಾಡುತ್ತಾರೆ. ಇದರ ಮಧ್ಯೆ ಬಟ್ಟೆ, ಚಪ್ಪಲಿ ಕದಿಯುವವರೂ ಇದ್ದಾರೆ. ಹೌದು...ಇಲ್ಲೋರ್ವ ವ್ಯಕ್ತಿ ಹಳೇ ಚಪ್ಪಲಿ ಬಿಟ್ಟು ದುಬಾರಿ ಬೆಲೆಯ ಚಪ್ಪಲಿ ಕದ್ದುಕೊಂಡು ಹೋಗಿದ್ದಾರೆ. ಇದೀಗ ಚಪ್ಪಲಿ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ, (ಆಗಸ್ಟ್ 28): ಕಳ್ಳರಲ್ಲಿ ನಾನಾ ಕಳ್ಳರು ಇದ್ದಾರೆ. ಕೆಲವರು ಒಂದೇ ಸಲಕ್ಕೆ ಶ್ರೀಮಂತರಾಗಬೇಕೆಂದು ಮನೆಗಳ್ಳತನ ಮಾಡುತ್ತಿದ್ದರೆ, ಇನ್ನೂ ಕೆಲವರು ದೊಡ್ಡ ಅಂಗಡಿಗಳನ್ನ ಟಾರ್ಗೆಟ್ ಮಾಡುತ್ತಾರೆ. ಇದರ ಮಧ್ಯೆ ಬಟ್ಟೆ, ಚಪ್ಪಲಿ ಕದಿಯುವವರೂ ಇದ್ದಾರೆ. ಹೌದು…ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ ದುಬಾರಿ ಬೆಲೆ ಚಪ್ಪಲಿ ಕದ್ದುಕೊಂಡಿರುವ ಹೋಗಿದ್ದಾನೆ. ಈ ಘಟನೆ ಹುಬ್ಬಳ್ಳಿಯ ಚಾಣಕ್ಯಪುರಿ ಬಡಾವಣೆ ಬಳಿ ನಡೆದಿದೆ. ಮನೆಯೊಂದರ ಗೇಟ್ ತೆಗೆದುಕೊಂಡು ಒಳಗೆ ಹೋಗಿ ತನ್ನ ಕಾಲಿನಲ್ಲಿದ್ದ ಹಳೇ ಚಪ್ಪಲಿಯನ್ನು ಅಲ್ಲಿ ಬಿಟ್ಟು ದುಬಾರಿ ಬೆಲೆ ಚಪ್ಪಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಇನ್ನು ಈ ಚಪ್ಪಲಿ ಕಳ್ಳತನ ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: Aug 28, 2023 04:35 PM
Follow Us
Latest Videos
