ಮಂಡ್ಯದ ಸಾಫ್ಟ್​ವೇರ್ ಇಂಜಿನೀಯರ್ ಶಶಾಂಕ್ ಬದುಕಲ್ಲಿ ಬಹಳ ಕ್ರೂರ ಆಟವಾಡಿದ ವಿಧಿ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 05, 2025 | 12:03 PM

ಮದುವೆಯ ದಿನವೇ ಶಶಾಂಕ್ ಜ್ವರದಿಂದ ನರಳುತ್ತಿದ್ದರು ಎಂದು ಅವರ ಸ್ನೇಹಿತರು ಹೇಳುತ್ತಾರೆ. ಅವರ ಸಂಬಂಧಿಯೊಬ್ಬರು ಹೇಳುವ ಪ್ರಕಾರ ನಿನ್ನೆ ಬೆಂಗಳೂರಲ್ಲಿ ಅವರು ತುಂಬಾ ಎದೆನೋವು ಅಂತ ದೂರಿದ ಕಾರಣ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಅದರೆ ಆಸ್ಪತ್ರೆಗೆ ಹೋದ ಶಶಾಂಕ್ ಗುಣವಾಗಿ ಹೊರಬಾರದೆ ಶವವಾಗಿ ಬಂದಿದ್ದಾರೆ.

ಮಂಡ್ಯ, ಮಾರ್ಚ್ 5: ವಿಧಿ ಕ್ರೂರಿ ನಿಜ ಆದರೆ ಮಂಡ್ಯದ ಶಶಾಂಕ್ (Shashank) ಬದುಕಲ್ಲಿ ಅದು ಇಷ್ಟು ಕ್ರೌರ್ಯ ಮೆರೆದೀತು ಅಂತ ಅವರ ಕುಟುಂಬದವರು ಅಂದುಕೊಂಡಿರಲಿಕ್ಕಿಲ್ಲ. ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಸಾಫ್ಟ್​ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಜಾರ್ಖಂಡ್ ಮೂಲದ ಅಷ್ಣಾ ಹೆಸರಿನ ಯುವತಿಯನ್ನು ಪ್ರೀತಿಸಿ ಕಳೆದ ಭಾನುವಾರವಷ್ಟೇ ಮೈಸೂರಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಅದರೆ ಮದುವೆಯಾದ ಕೇವಲ ಮೂರು ದಿನಗಳ ನಂತರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂದರೆ ನಂಬಲು ಸಾಧ್ಯವೇ? ವಿಧಿ ಇಷ್ಟೊಂದು ಕ್ರೂರಿಯಾಗುವುದು ಹೇಗೆ ಸಾಧ್ಯ ಅಂತ ಅಷ್ಣಾ, ಸಂಬಂಧಿಕರು ಮತ್ತು ಸ್ನೇಹಿತರು ಕೇಳುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Viral Video: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.