Viral Video: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು
ಕುಟುಂಬದ ಮದುವೆಯೊಂದರಲ್ಲಿ ವೇದಿಕೆ ಮೇಲೆ ನೃತ್ಯ ಮಾಡುತ್ತಿರುವಾಗಲೇ ಯುವತಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ರೆಸಾರ್ಟ್ವೊಂದರಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಯುವತಿಯೊಬ್ಬರು ಖುಷಿ ಖುಷಿಯಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಳು, ಏಕಾಏಕಿ ಕುಸಿದುಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘರ್ಕೆಕಲೇಶ್ ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸಂಬಂಧಿಯ ಮದುವೆ ಸಮಾರಂಭದಲ್ಲಿ ವೇದಿಕೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ರೆಸಾರ್ಟ್ವೊಂದರಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಯುವತಿಯೊಬ್ಬರು ಖುಷಿ ಖುಷಿಯಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಳು, ಏಕಾಏಕಿ ಕುಸಿದುಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘರ್ಕೆಕಲೇಶ್ ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಸೀರೆಯುಟ್ಟ ಯುವತಿ ಬಾಲಿವುಡ್ನ ಲೆಹ್ರಾ ಕೆ ಬಲ್ಖಾ ಕೆ ಹಾಡಿಗೆ ನೃತ್ಯ ಮಾಡುತ್ತಿದ್ದಳು, ಇದ್ದಕ್ಕಿಂದ್ದಂತೆ ಕುಸಿದುಬೀಳುವುದನ್ನು ಕಾಣಬಹುದು. ವಿವರಗಳ ಪ್ರಕಾರ,ಮೃತಳನ್ನು ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಅವರು ಇಂದೋರ್ ನಿವಾಸಿಯಾಗಿದ್ದರು. ಮ್ಮ ಸೋದರಸಂಬಂಧಿಯ ಸಹೋದರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ವಿದಿಶಾಗೆ ಬಂದಿದ್ದರು. ‘ಹಲ್ದಿ’ ಕಾರ್ಯಕ್ರಮದ ಸಮಯದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಮಾರಂಭದಲ್ಲಿ ಹಾಜರಿದ್ದ ವೈದ್ಯರು ಕೂಡಲೇ ಸಿಪಿಆರ್ ನೀಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಪರಿಣಿತಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು.
ಮತ್ತಷ್ಟು ಓದಿ: Viral: ಪ್ರೀತಿ ಒಪ್ಪದ ಹುಡುಗಿಯ ಮೇಲೆ ಪ್ರಪೋಸ್ ಡೇಯಂದೇ ಕೈ ಮಾಡಿದ ಭೂಪ; ವಿಡಿಯೋ ವೈರಲ್
ಆಕೆ ಎಂಬಿಎ ಪದವೀಧರೆಯಾಗಿದ್ದು, ಇಂದೋರ್ನಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಆಕೆಯ ಕಿರಿಯ ಸಹೋದರಿ ತನ್ನ 12ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಳು.
A young woman suddenly d!ed while dancing on stage at her sister’s wedding in Vidisha MP pic.twitter.com/6e1dqgevka
— Ghar Ke Kalesh (@gharkekalesh) February 9, 2025
ಮದುವೆ ಮನೆಗಳಲ್ಲಿ ಊಟ ಸರಿಯಾಗಿ ಮಾಡದೆ, ನೀರನ್ನು ಸರಿಯಾಗಿ ಕುಡಿಯದೇ, ಅತಿಯಾದ ದೈಹಿಕ ಚಟುವಿಕೆ, ನೃತ್ಯಾಭ್ಯಾಸದಿಂದ ಕೂಡ ಹೃದಯ ಸಂಕುಚಿತಗೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




