ಮಂಡ್ಯ: ಮಾಜಿ ಶಾಸಕ ಚಲುವರಾಯಸ್ವಾಮಿ ಮತ್ತು ಶಾಸಕ ಸುರೇಶ್ ಗೌಡ ನಡುವೆ ಟಾಕ್ ಫೈಟ್

| Updated By: Rakesh Nayak Manchi

Updated on: Dec 23, 2022 | 8:37 AM

ಜೆಡಿಎಸ್​ನ ಪಂಚರತ್ನ ಯಾತ್ರೆ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಶಾಸಕ ಸುರೇಶ್ ಗೌಡ, ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಮಂಡ್ಯ: ಒಂದೆಡೆ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇನ್ನೊಂದೆಡೆ ಅಧಿವೇಶನಕ್ಕೆ ಗೈರಾಗಿ ಜೆಡಿಎಸ್ ಪಂಚರತ್ನ ಯಾತ್ರೆ (Pancha Ratna Yatra) ನಡೆಸುತ್ತಿದೆ. ಈ ಬಗ್ಗೆ ಕೈ ಮಾಜಿ ಶಾಸಕ ಚೆಲುವರಾಯಸ್ವಾಮಿ (Chaluvaraya Swamy) ವ್ಯಂಗ್ಯವಾಡಿದ್ದಾರೆ. ಇದು ಚೆಲುವರಾಯಸ್ವಾಮಿ ಮತ್ತು ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ (Suresh Gowda) ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಚಲುವರಾಯಸ್ವಾಮಿ ಓರ್ವ ರಾಜಕೀಯ ಶಕುನಿ ಇದ್ದ ಹಾಗೆ. ನಮ್ಮ ಪಕ್ಷದ ಕಾರ್ಯಕ್ರಮದ ಕುರಿತು ಮಾತನಾಡುವುದಕ್ಕೆ ಅವರ್ಯಾರು? ಅವರು ಸರಿಯಾಗಿ ಇದ್ದಿದ್ದರೆ ಅವರನ್ನ ಜನರು ಯಾಕೆ ಮನೆಗೆ ಕಳಿಸುತ್ತಿದ್ದರು ಎಂದು ಸುರೇಶ್ ಗೌಡ ಅವರು ಮಾತಿನಲ್ಲೇ ಚಾಟಿ ಬೀಸಿದರು. ಹಾಗಾದರೆ ಜೆಡಿಎಸ್​ ಶಾಸಕ ಸುರೇಶ್ ಗೌಡ ಅವರ ಈ ವಾಗ್ದಾಳಿಗೆ ಚಲುವರಾಯಸ್ವಾಮಿ ಹೇಳಿದ್ದಾದರೂ ಏನು? ಅದಿವೇಶನ ಬಿಟ್ಟು ಯಾತ್ರೆ ನಡೆಸುತ್ತಿರುವುದಕ್ಕೆ ಚಲುವರಾಯಸ್ವಾಮಿ ಅವರು ವ್ಯಂಗ್ಯವಾಡಿದ್ದರು. ಸಮಸ್ಯೆಗಳಿಗೆ ಅದಿವೇಶನದಲ್ಲಿ ಚರ್ಚಿಸುವುದು ಬಿಟ್ಟು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂತರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಈ ಹಿನ್ನಲೆ ನಿನ್ನೆ ಮಂಡ್ಯ ಜಿಲ್ಲೆ ಕೊಪ್ಪ ಗ್ರಾಮದಲ್ಲಿ ಮಾಜಿ ಶಾಸಕರಿಗೆ ಹಾಲಿ ಶಾಸಕರು ಮಾತಿನಲ್ಲೆ ಚಾಟಿ ಬೀಸಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 am, Fri, 23 December 22

Follow us on