ಗಗನಚುಕ್ಕಿ ಜಲಪಾತೋತ್ಸವದ ಲೇಸರ್ ಶೋಗೆ ಪ್ರವಾಸಿಗರು ಫಿದಾ

Updated on: Sep 14, 2025 | 9:12 AM

ಮಂಡ್ಯದ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಎರಡು ದಿನಗಳ ಕಾಲ ಆಯೋಜಿರುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ಸಿಕ್ಕಿತ್ತು.‌ಮೊದಲಿಗೆ ವೇದಿಕೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸ್ಥಳಿಯ ಶಾಸಕ ನರೇಂದ್ರಸ್ವಾಮಿ ಚಾಲನೆ ನೀಡಿದರು.

ಮಂಡ್ಯ, ಸೆಪ್ಟೆಂಬರ್​ 14: ಗಗನ ಚುಕ್ಕಿ ಜಲಪಾತೋತ್ಸವಕ್ಕೆ (Gaganachukki waterfall) ಶನಿವಾರ ಸಿಎಂ ಸಿದ್ದರಾಮಯ್ಯ ಅದ್ದೂರಿ ಚಾಲನೆ ನೀಡಿದ್ದಾರೆ. ಒಂದೆಡೆ ಗಾಯಕರ ಗಾನಸುಧೆ ಜನರನ್ನ ಹುಚ್ಚೆದ್ದು ಕುಣಿಸಿದರೆ, ಮತ್ತೊಂದೆಡೆ ಜಗಮಗಿಸೋ ಲೈಟಿಂಗ್​ನಲ್ಲಿ ಜಲಪಾತ ಕಂಗೊಳಿಸಿದ್ದು, ಜನರು ಫಿದಾ ಆಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.