ಮಂಡ್ಯದಲ್ಲಿ ಕುಮಾರಸ್ವಾಮಿ ಪಕ್ಷದ ಒಬ್ಬ ಶಾಸಕ ಒಂದು ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಹಲ್ಲೆ ಮಾಡಿದ್ದಾರೆ!
ಮನೆಗಳಲ್ಲಿ ಪ್ರೌಢ ಶಾಲೆ ತಲುಪಿದ ಮಕ್ಕಳನ್ನು ತಂದೆತಾಯಿಗಳು ಹೊಡೆಯುವುದು ಹಾಗಿರಲಿ, ಬಯ್ಯುವುದಕ್ಕೂ ಮುಂದಾಗದ ಕಾಲವಿದು. ಅಂಥದ್ದರಲ್ಲಿ ಯಕಶ್ಚಿತ್ ಒಬ್ಬ ಶಾಸಕ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಸಾರ್ವಜನಿಕವಾಗಿ ಮತ್ತು ಅವರ ಸ್ಟಾಫ್ ಎದುರುಗಡೆಯೇ ಕೈ ಮಾಡುತ್ತಾರೆಂದರೆ?
Mandya: ನೀವೇನೇ ಹೇಳಿ ಮಾರಾಯ್ರೇ. ಈ ವ್ಯಕ್ತಿ ಜನಪ್ರತಿನಿಧಿ ಅನಿಸಿಕೊಳ್ಳೋದಿಕ್ಕೆ ನಾಲಾಯಕ್ಕು. ಇದು ಮಂಡ್ಯದ ಸರ್ಕಾರಿ ಐಟಿಐ ಕಾಲೇಜಿನಲ್ಲಿ (ITI College) ನಡೆದಿರುವ ಘಟನೆ. ಕಾಲೇಜನ್ನು ಅಪಗ್ರೇಡ್ ಮಾಡಿದ ಹಿನ್ನೆಲೆಯಲ್ಲಿ ಉದ್ಘಾಟನೆಗೆಂದು ಬಂದ ಮಂಡ್ಯದ ಜೆಡಿಎಸ್ ಶಾಸಕ ಎಮ್ ಶ್ರೀನಿವಾಸ (M Srinivas) ತಾನು ನಿಂತಿದ್ದ ಸ್ಥಳಕ್ಕೆ ಕಾಲೇಜಿನ ಪ್ರಿನ್ಸಿಪಾಲ್ ಆರ್ ನಾಗಾನಂದ (R Nagananda) ಅವರು ಕೇವಲ 30 ಸೆಕೆಂಡ್ ತಡವಾಗಿ ಬಂದಿದ್ದಕ್ಕೆ ಕೆನ್ನೆಗೆ ಬಾರಿಸುತ್ತಾರೆ. ನಾವು ಯಾವ ಜಮಾನಾದಲ್ಲಿದ್ದೇವೆ ಮಾರಾಯ್ರೇ? ಮನೆಗಳಲ್ಲಿ ಪ್ರೌಢ ಶಾಲೆ ತಲುಪಿದ ಮಕ್ಕಳನ್ನು ತಂದೆತಾಯಿಗಳು ಹೊಡೆಯುವುದು ಹಾಗಿರಲಿ, ಬಯ್ಯುವುದಕ್ಕೂ ಮುಂದಾಗದ ಕಾಲವಿದು. ಅಂಥದ್ದರಲ್ಲಿ ಯಕಶ್ಚಿತ್ ಒಬ್ಬ ಶಾಸಕ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಸಾರ್ವಜನಿಕವಾಗಿ ಮತ್ತು ಅವರ ಸ್ಟಾಫ್ ಎದುರುಗಡೆಯೇ ಕೈ ಮಾಡುತ್ತಾರೆಂದರೆ?
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ