ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು: ಒಂದೇ ಮನೆಯ 7 ದನ, ಕರುಗಳ ಸಾವು

Edited By:

Updated on: Jun 23, 2025 | 8:54 AM

ಮಂಗಳೂರಿನ ಕೆಲರಾಯಿಯಲ್ಲಿ ಒಂದೇ ಕುಟುಂಬದ ಏಳು ದನ, ಕರುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಕಳೆದ 50 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿರುವ ಪ್ರಕಾಶ್ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ. ದನಗಳಿಗೆ ವಿಷಪ್ರಾಶನ ನೀಡಲಾಗಿದೆ ಎಂದು ಅನುಮಾನಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಶುಪಾಲನೆ ಇಲಾಖೆಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಮಂಗಳೂರು, ಜೂನ್​ 23: ನಗರ ಹೊರವಲಯದ ನೀರು ಮಾರ್ಗ ಸಮೀಪದ ಕೆಲರಾಯಿ ಎಂಬಲ್ಲಿ ಒಂದೇ ಮನೆಯ 7 ದನ, ಕರುಗಳು ನರಳಿ ನರಳಿ‌ ನಿಗೂಢವಾಗಿ ಸಾವನ್ನಪ್ಪುತ್ತಿರುವಂತಹ (death) ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ 50 ವರ್ಷಗಳಿಂದ ಹೈನುಗಾರಿಕೆ ನಡೆಸಿಕೊಂಡು ಬರುತ್ತಿರುವ ಪ್ರಕಾಶ್ ಕುಟುಂಬದ ದನ, ಕರುಗಳು ಸಾವನ್ನಪ್ಪಿವೆ. ವಿಷಪ್ರಾಶನ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.