Karnataka Assembly Polls Results: ಎಲ್ಲ ಅಭ್ಯರ್ಥಿಗಳು ಮನೆಗಳಲ್ಲಿ ಕೂತು ಟಿವಿ ವೀಕ್ಷಿಸುತ್ತಿದ್ದರೆ, ಯುಟಿ ಖಾದರ್ ಕ್ರಿಕೆಟ್ ಆಡುತ್ತಿದ್ದಾರೆ!

Karnataka Assembly Polls Results: ಎಲ್ಲ ಅಭ್ಯರ್ಥಿಗಳು ಮನೆಗಳಲ್ಲಿ ಕೂತು ಟಿವಿ ವೀಕ್ಷಿಸುತ್ತಿದ್ದರೆ, ಯುಟಿ ಖಾದರ್ ಕ್ರಿಕೆಟ್ ಆಡುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 13, 2023 | 11:22 AM

ಅಂದಹಾಗೆ, ತಮ್ಮ ಕ್ಷೇತ್ರದಲ್ಲಿ ಖಾದರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಬ್ಯರ್ಥಿಗಿಂತ ಮುಂದಿದ್ದಾರೆ.

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ (Mangaluru Constituency) ಈಗಾಗಲೇ ಮೂರು ಬಾರಿ ಗೆದ್ದು ನಾಲ್ಕನೇ ಬಾರಿ ಆಯ್ಕೆ ಬಯಸಿರುವ ಯುಟಿ ಖಾದರ್ (UT Khader) ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ ಮಾರಾಯ್ರೇ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಅತಂಕದಿಂದ ಟಿವಿ ಮುಂದೆ ಕೂತಿದ್ದರೆ, ಖಾದರ್ ಮಾತ್ರ ನಿರಾತಂಕ ಭಾವದಿಂದ ಉಳ್ಳಾಲದ (Ullala) ಭಾರತ್ ಮೈದಾನದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡಿಕೊಂಡಿದ್ದಾರೆ. ಅಂದಹಾಗೆ, ತಮ್ಮ ಕ್ಷೇತ್ರದಲ್ಲಿ ಖಾದರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಬ್ಯರ್ಥಿಗಿಂತ ಮುಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ