ಮಂಗಳೂರಿನಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ: ವಿಡಿಯೋ ನೋಡಿ

Edited By:

Updated on: Nov 24, 2025 | 9:47 PM

ಮಂಗಳೂರು ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂಡಬಿದ್ರೆ ನಿವಾಸಿ ಅಖಿಲೇಶ್ ಮೇಲೆ ತಲ್ವಾರ್‌ನಿಂದ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಖಿಲೇಶ್ ಮೊಣಕೈಗೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳು ಅಖಿಲೇಶ್‌ಗೆ ಮೂಡಬಿದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಡಿಯೋ ನೋಡಿ.

ಮಂಗಳೂರು, ನವೆಂಬರ್​ 24: ನಗರದ ಹೊರವಲಯದಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ ನಡೆದಿರುವಂತಹ ಘಟನೆ ನಡೆದಿದೆ. ಬೈಕ್‌ನಲ್ಲಿ ತಲ್ವಾರ್‌ ಹಿಡಿದು ಸಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯವೆಸಗಲಾಗಿದೆ. ಮೂಡಬಿದ್ರೆ ನಿವಾಸಿ ಅಖಿಲೇಶ್‌ ಹಲ್ಲೆಗೊಳಗಾದ ವ್ಯಕ್ತಿ. ಮೊಣಕೈ ಭಾಗಕ್ಕೆ ಗಾಯವಾಗಿದ್ದು, ಮೂಡಬಿದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಲ್ವಾರ್​ ದಾಳಿ ಮಾಡಿದ್ದ ನಾಲ್ವರ ಪೈಕಿ ಓರ್ವನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಿನಾನ್ ಎಂಬಾತನ್ನ ಹಿಡಿದು ಜನರು ಥಳಿಸಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 24, 2025 08:37 PM