ಕರ್ನಾಟಕ ನಕ್ಸಲರ ಶರಣಾಗತಿ ಪ್ರಕ್ರಿಯೆ ಅನುಮಾನ ಹುಟ್ಟಿಸುತ್ತದೆ, ಅದೊಂದು ದೊಡ್ಡ ಪ್ರಕ್ರಿಯೆ: ಕೆ ಅಣ್ಣಾಮಲೈ
ಕರ್ನಾಟಕದ ಬಿಜೆಪಿ ನಾಯಕರು ನಕ್ಸಲರ ಶರಣಾಗತಿ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಅವರೊಂದಿಗೆ ಮಾತುಕತೆ ನಡೆಸುವುದು ಬಹಳ ದಿನಗಳ ಕಾಲ ನಡೆಯುವ ಕಾರ್ಯ, ಅದರೆ ವಿಕ್ರಂಗೌಡನ ಹತ್ಯೆ ನಡೆದ ಕೆಲವೇ ದಿನಗಳ ಬಳಿಕ ನಕ್ಸಲರು ಶರಣಾಗಿದ್ದಾರೆ, ವಿಕ್ರಂಗೌಡನ ಎನ್ಕೌಂಟರ್ ಹಿಂದಿನ ದಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ವಾಸವಾಗಿದ್ದ ಜನರನ್ನು ಮನೆಗಳಿಂದ ತೆರವುಗೊಳಿಸಿದ್ದಾರೆ, ಹಾಗಾಗಿ ಎನ್ಕೌಂಟರ್ ಮೇಲೂ ಸಂಶಯ ಉಂಟಾಗುತ್ತಿದೆ ಎಂದು ಅಣ್ಣಾಮಲೈ ಹೇಳಿದರು.
ಮಂಗಳೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರುವ ತಮಿಳು ನಾಡು ಬಿಜೆಪಿ ಮುಖಂಡ ಕೆ ಅಣ್ಣಾಮಲೈ ರಾಜ್ಯದಲ್ಲಿ ನಡೆದ ನಕ್ಸಲ್ ಶರಣಾಗತಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹಿಂದೆ ತಾನು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗಲೂ ನಕ್ಸಲರು ಶರಣಾಗಿದ್ದರು, ಅದೊಂದು ದೊಡ್ಡ ಪ್ರಕ್ರಿಯೆ , ಅವರೊಂದಿಗೆ ಹತ್ತಾರು ವಿಷಯಗಳನ್ನು ಚರ್ಚೆ ಮಾಡಿ ಬದುಕನ್ನು ಹೊಸದಾಗಿ ಆರಂಭಿಸಲು ತಕ್ಕ ವ್ಯವಸ್ಥೆಯನ್ನು ಮಾಡಿಕೊಡಬೇಕಾಗುತ್ತದೆ, ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿ ಪಾಲಿಸಿ ಚಾಲ್ತಿಯಲ್ಲಿದೆ, ನಕ್ಸಲರು ಶರಣಾದರೂ ಅವರ ಮೇಲಿನ ಪ್ರಕರಣಗಳ ವಿಚಾರಣೆ ಕೋರ್ಟಲ್ಲಿ ನಡೆಯುವುದರಿಂದ ಅವರು ಹಾಜರಾಗಬೇಕಾಗುತ್ತದೆ ಎಂದು ಅಣ್ಣಾಮಲೈ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ