ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೇಸ್ತಾ ಮಾತ್ರವಲ್ಲ ಹತ್ತಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಿತ್ತು: ಸೂಲಿಬೆಲೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2022 | 4:06 PM

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇವಲ ಪರೇಶ್ ಮೆಸ್ತಾ ಮಾತ್ರವಲ್ಲ ಇನ್ನೂ ಹತ್ತಾರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು, ಅವರ ಕೈಗಳು ಈಗಲೂ ರಕ್ತಸಿಕ್ತವಾಗಿವೆ ಎಂದು ಸೂಲಿಬೆಲೆ ಹೇಳಿದರು.

ಬೆಂಗಳೂರು: ಪರೇಶ್ ಮೇಸ್ತಾ (Paresh Mesta) ಸಾವು ಕುರಿತು ಕೇಂದ್ರ ತನಿಖಾ ದಳ ನೀಡಿರುವ ವರದಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯನ್ನು ಟೀಕಿಸಲು ಹೊಸ ಅಸ್ತ್ರ ನೀಡಿದೆ. ಅದು ಸ್ವಾಭಾವಿಕ ಸಾವು ಎಂದು ವರದಿ ಹೇಳಿರುವುದರಿಂದ ಬಿಜೆಪಿ ಕಾಂಗ್ರೆಸ್ ನ ಕ್ಷಮೆಯಾಚಿಸಬೇಕೆಂದು ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ (Chakaravarti Sulibele), ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇವಲ ಪರೇಶ್ ಮೆಸ್ತಾ ಮಾತ್ರವಲ್ಲ ಇನ್ನೂ ಹತ್ತಾರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು, ಅವರ ಕೈಗಳು ಈಗಲೂ ರಕ್ತಸಿಕ್ತವಾಗಿವೆ. ಅವರ ಕಾಲದಲ್ಲೇ ಬಂಧನಕ್ಕೊಳಗಾಗಿದ್ದ ಪಿಎಫ್ಐ ಕಾರ್ಯಕರ್ತರ ಬಿಡುಗಡೆಯಾಗಿತ್ತು ಮತ್ತು ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ಸು ಪಡೆಯಲಾಗಿತ್ತು ಎಂದು ಹೇಳಿದರು.