ಮೈಸೂರು: ಅರ್ಚಕನೊಬ್ಬನ ಜೊತೆ ಓಡಿಹೋದ ಗೃಹಿಣಿ ಅವನಿಂದ ಮೋಸಕ್ಕೊಳಗಾದರೂ ಅವನೇ ಬೇಕು ಅನ್ನುತ್ತಿದ್ದಾಳೆ
ಆ ಮಹಾಪುರುಷ 10 ದಿನಗಳ ಕಾಲ ಈಕೆಯೊಂದಿಗೆ ಅಲ್ಲಿ ಇಲ್ಲಿ ಸುತ್ತಿ ಕೊನೆಗೆ ಇಲ್ಲಿ ಕಾಣುತ್ತಿರುವ ಕಾಡಿನಂಥ ಜಾಗದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿ ಅದೇನು ಕಂಡಿದ್ದಾಳೋ, ಈ ಪಾಟಿ ಮೋಸ ಹೋದರೂ ಅವನೇ ಬೇಕು ಅಂತ ಪಟ್ಟು ಹಿಡಿದಿದ್ದಾಳೆ.
Mysuru: ಈ 35-ವರ್ಷ-ವಯಸ್ಸಿನ ಗೃಹಿಣಿ (housewife) ಕತೆ ಕೇಳಿ ಮರುಕ ಹುಟ್ಟುವುದು ನಿಜನಾದರೂ ನೆಮ್ಮದಿಯಿಂದ ಸಾಗುತ್ತಿದ್ದ ತನ್ನ ಬದುಕನ್ನು ಪರಪುರುಷನ ಸಾಂಗತ್ಯ ಬಯಸಿ ಹಾಳು ಮಾಡಿಕೊಂಡಿದ್ದು ಕೇಳಿ ಹೇವರಿಕೆಯೂ ಹುಟ್ಟುತ್ತದೆ. ಮೈಸೂರು ನಂಜನಗೂಡು (Nanjangud) ತಾಲ್ಲೂಕಿನ ಕೊಲ್ಲಾಪುರ ಗ್ರಾಮದವಳಾಗಿರುವ ಈಕೆ ಅದೇ ಊರಿನ ಮಹದೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಸಂತೋಷ (Santosh) ಹೆಸರಿನ ವ್ಯಕ್ತಿಯ ಜೊತೆ ಜೂನ್ 12 ರಂದು ಗಂಡನ ಮನೆ ಬಿಟ್ಟು ಓಡಿ ಹೋಗಿದ್ದಳು. ಆ ಮಹಾಪುರುಷ 10 ದಿನಗಳ ಕಾಲ ಈಕೆಯೊಂದಿಗೆ ಅಲ್ಲಿ ಇಲ್ಲಿ ಸುತ್ತಿ ಕೊನೆಗೆ ಇಲ್ಲಿ ಕಾಣುತ್ತಿರುವ ಕಾಡಿನಂಥ ಜಾಗದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿ ಅದೇನು ಕಂಡಿದ್ದಾಳೋ, ಈ ಪಾಟಿ ಮೋಸ ಹೋದರೂ ಅವನೇ ಬೇಕು ಅಂತ ಪಟ್ಟು ಹಿಡಿದಿದ್ದಾಳೆ. ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರು ಸ್ಥಾಪಿಸಿದ ಬ್ಯಾಂಕ್ ಗಳನ್ನು ಮುಚ್ಚಿಸಿ ಪ್ರಧಾನಿ ಮೋದಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ: ಸಿದ್ದರಾಮಯ್ಯ