ತಮ್ಮ ದೇಶದ ಬಗ್ಗೆಯೇ ಒಳ್ಳೆಯ ಮಾತುಗಳನ್ನಾಡದವರನ್ನು ಜನ ಒಪ್ಪುವರೇ; ರಾಹುಲ್ ಗಾಂಧಿ ಬಗ್ಗೆ ಗಾಯಕಿ ಮೇರಿ ಮಿಲ್ಬೆನ್ ಪ್ರಶ್ನೆ

|

Updated on: Jun 30, 2023 | 10:17 PM

‘ದಿ ನ್ಯೂ ಇಂಡಿಯನ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರೋಹನ್ ದುವಾ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿದ ಮೇರಿ ಮಿಲ್ಬೆನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ದೇಶದ ಬಗ್ಗೆಯೇ ಒಳ್ಳೆಯ ಮಾತುಗಳನ್ನಾಡದವರನ್ನು ಜನ ಒಪ್ಪುವರೇ; ರಾಹುಲ್ ಗಾಂಧಿ ಬಗ್ಗೆ ಗಾಯಕಿ ಮೇರಿ ಮಿಲ್ಬೆನ್ ಪ್ರಶ್ನೆ
ಮೇರಿ ಮಿಲ್ಬೆನ್ & ರಾಹುಲ್ ಗಾಂಧಿ
Follow us on

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಗಳಿಗೆ ಭೇಟಿ ನೀಡಿದಾಗ ಭಾರತದ ಪ್ರಜಾಪ್ರಭುತ್ವ, ಆಡಳಿತ ಇತ್ಯಾದಿ ವಿಚಾರಗಳ ಬಗ್ಗೆ ಹಲವು ಬಾರಿ ಟೀಕಿಸಿದ್ದಾರೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರದ ನಾಯಕರು ಅವರನ್ನು ಟೀಕಿಸಿರುವುದು ಹಲವು ಬಾರಿ ನಡೆದಿದೆ. ರಾಹುಲ್ ಗಾಂಧಿ (Rahul Gandhi) ಅವರು ವಿದೇಶಗಳಲ್ಲಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅಮೆರಿಕದ ಶ್ವೇತಭವನದ ಅಧಿಕೃತ ಗಾಯಕಿ ಮೇರಿ ಮಿಲ್ಬೆನ್ (Mary Milben)  ಕೂಡ ರಾಹುಲ್ ಗಾಂಧಿ ವಿರುದ್ಧ ಅಂಥದ್ದೇ ಮಾತುಗಳನ್ನಾಡಿದ್ದು, ತಮ್ಮದೇ ದೇಶದ ಬಗ್ಗೆ ಒಳ್ಳೆಯ ಮಾತುಗಳನ್ನಾಡದವರನ್ನು ಜನ ಒಪ್ಪುವರೇ ಎಂದು ಪ್ರಶ್ನಿಸಿದ್ದಾರೆ.

‘ದಿ ನ್ಯೂ ಇಂಡಿಯನ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರೋಹನ್ ದುವಾ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿದ ಮೇರಿ ಮಿಲ್ಬೆನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷೆಯ ಬಗ್ಗೆ ಅವರ ಕೆಲವು ಭಾಷಣಗಳನ್ನು ಕೇಳಿದಾಗ ತಿಳಿಯುತ್ತದೆ. ತಮ್ಮದೇ ದೇಶದ ಬಗ್ಗೆ ಒಳ್ಳೆಯ ಮಾತುಗಳನ್ನಾಡದ ನಾಯಕನನ್ನು ಒಪ್ಪಿಕೊಳ್ಳುವುದು ಅಥವಾ ಅವರ ಪರ ಮತ ಚಲಾಯಿಸುವುದು ಯಾವುದೇ ದೇಶಕ್ಕೆ ಅಥವಾ ದೇಶವೊಂದರ ನಾಗರಿಕರಿಗೆ ತುಂಬಾ ಕಷ್ಟಕರ ವಿಚಾರವಾಗಿದೆ. ತನ್ನ ದೇಶದ ಪರಂಪರೆಯನ್ನು ಗುರುತಿಸಿ ಗೌರವಿಸುವುದು ಒಬ್ಬ ಮಹಾನ್ ನಾಯಕನ ಲಕ್ಷಣ. ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನು ಗೌರವಿಸುತ್ತಾರೆ ಎಂದು ಸಂದರ್ಶನದಲ್ಲಿ ಮೇರಿ ಮಿಲ್ಬೆನ್ ಹೇಳಿದ್ದಾರೆ.

ಇದನ್ನೂ ಓದಿ: Mary Milben: ರಾಷ್ಟ್ರಗೀತೆ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಶ್ವೇತಭವನದಲ್ಲಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ