Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravi slams partymen: ಹೆಸರು ಉಲ್ಲೇಖಿಸದೆ ಬಸನಗೌಡ ಯತ್ನಾಳ್ ಮತ್ತು ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ

Ravi slams partymen: ಹೆಸರು ಉಲ್ಲೇಖಿಸದೆ ಬಸನಗೌಡ ಯತ್ನಾಳ್ ಮತ್ತು ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2023 | 6:33 PM

ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಬೇಕಾಗುತ್ತದೆ ಎಂದು ರವಿ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಪಕ್ಷದ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಹೆಸರುಗಳನ್ನು ಉಲ್ಲೇಖಿಸದೆ ತರಾಟೆಗೆ ತೆಗದುಕೊಂಡರು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ವವಸ್ಥೆ  ಜಾರಿಯಲ್ಲಿರುವುದರಿಂದ ಯಾವುದನ್ನು ಎಲ್ಲಿ ಮಾತಾಡಬೇಕು ಅನ್ನೋ ಪರಿಜ್ಞಾನ ಇರಬೇಕು ಎಂದು ರವಿ ಹೇಳಿದರು. ಮಾತಾಡಲು ಎಲ್ಲರಿಗೂ ಅವಕಾಶ ಮತ್ತು ಮಿತಿ ಇರುತ್ತವೆ, ಬೇರೆ ಪಕ್ಷಗಳ ಬಗ್ಗೆ ಮಾತಾಡಬೇಕಾದರೆ ಸಾರ್ವಜನಿಕವಾಗಿ ಮಾತಾಡಬೇಕಾಗುತ್ತ್ತದೆ ಹಾಗೆಯೇ ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಬೇಕಾಗುತ್ತದೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ