MP Renukacharya; ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ತಿಳಿಸುವೆ: ಎಂಪಿ ರೇಣುಕಾಚಾರ್ಯ
ತಾನು ಪಕ್ಷದ ವಿರುದ್ಧ ಮಾತಾಡುತ್ತಿಲ್ಲ ಅದರೊಳಗಿರುವ ವ್ಯವಸ್ಥೆ ಬಗ್ಗೆ ಮಾತಾಡುತ್ತಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.
ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಶಿಸ್ತು ಸಮಿತಿ ನೊಟೀಸ್ ನೀಡಿರುವುದಕ್ಕೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ವ್ಯಗ್ರರಾಗಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ರಾಜ್ಯದಲ್ಲಿ ಪಕ್ಷದ ಸೋಲಿಗೆ ಕಾರಣಗಳ್ಯಾವು ಅಂತ ಬಿಡಿಸಿ ಹೇಳಿದರು. ಒಂದು ಸಭೆಯನ್ನು ಕೂಡ ನಡೆಸದೆ, ಪಕ್ಷದ ಎಲ್ಲಾ ವರ್ಗಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಳಮೀಸಲಾತಿ (internal reservation) ಘೋಷಿಸಿದ್ದು, 7 ಕೆಜಿ ಅಕ್ಕಿಯನ್ನು 4 ಕೆಜಿಗೆ ಇಳಿಸಿದ್ದು ಸೋಲಿಗೆ ಪ್ರಮುಖ ಕಾರಣಗಳಾದವು. ಅಧಿಕಾರದಲ್ಲಿruವಾಗಲೇ 3 ಸಿಲಿಂಡರ್ ಮತ್ತು 10 ಕೆಜಿ ಅಕ್ಕಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಯಾಕೆ ನೀಡಲಿಲ್ಲ ಎಂದ ರೇಣುಕಾಚಾರ್ಯ ಕೇಳಿದರು. ಎನ್ ಪಿ ಎಸ್ ನೌಕರರ ಶಾಪವೂ ಸರ್ಕಾರಕ್ಕೆ ತಟ್ಟಿತ್ತು ಎಂದ ಅವರು ತಾನು ಪಕ್ಷದ ವಿರುದ್ಧ ಮಾತಾಡುತ್ತಿಲ್ಲ ಅದರೊಳಗಿರುವ ವ್ಯವಸ್ಥೆ ಬಗ್ಗೆ ಮಾತಾಡುತ್ತಿದ್ದೇನೆ ಮತ್ತು ಇಲ್ಲಿ ನಡೆಯುತ್ತಿರವ ಎಲ್ಲ ವಿದ್ಯಮಾನಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ತಿಳಿಸುತ್ತೇನೆ ಅಂತ ರೇಣುಕಾಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ