MPR takes on Kateel again: ನಳಿನ್ ಕುಮಾರ್ ಕಟೀಲ್ರನ್ನು ಅಧ್ಯಕ್ಷ ಸ್ಥಾನದಿಂದ ರೇಣುಕಾಚಾರ್ಯ ಕೆಳಗಳಿಸಿದೆ ವಿಶ್ರಮಿಸಲಾರರೇನೋ?
ಪಕ್ಷದ ರಾಜ್ಯ ಘಟಕವನನ್ನು ಸರ್ವಾಧಿಕಾರಿಯಂತೆ ನಡೆಸಲಾಗುತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಮತ್ತೊಮ್ಮೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರನ್ನು ತೀವ್ರ ವಾಗ್ದಂಡನೆಗೆ ಗುರಿ ಮಾಡಿದರು. ಕಟೀಲ್ ಹೆಸರನ್ನು ಉಲ್ಲೇಖಿಸಲಿಲ್ಲವಾದರೂ ಅವರನ್ನೇ ಉದ್ದೇಶಿಸಿ ರೇಣುಕಾಚಾರ್ಯ ಟೀಕೆ ಮಾಡಿದರು. ಚುನಾವಣೆಯಲ್ಲಿ ಸೋತೆನೆಂಬ ಕಾರಣಕ್ಕೆ ಹತಾಷೆಯಿಂದ ಮಾತಾಡುತ್ತಿಲ್ಲ ಎಂದ ಅವರು, ತಾವು ಸೋತಾಗ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿವೈ ವಿಜಯೇಂದ್ರ (BY Vijayendra) ಕರೆ ಮಾಡಿ ಮಾತಾಡಿದರು ಅದರೆ ಪಕ್ಷದ ಅಧ್ಯಕ್ಷರು ಮಾತಾಡಲಿಲ್ಲ ಎಂದರು. ಸೋತ ಮಾತ್ರಕ್ಕೆ ತಮ್ಮ ಸಾಮರ್ಥ್ಯ ಕ್ಷೀಣಿಸುತ್ತದೆಯೇ, ಕ್ಷೇತ್ರಕ್ಕೆ ಹೋಗಿ ಕೇಳಿದರೆ ಒಬ್ಬ ನಾಯಕನ ಸಾಮರ್ಥ್ಯವೇನು ಅನ್ನೋದು ಗೊತ್ತಾಗುತ್ತದೆ, ಗೆದ್ದವರಿಗೆ ಮಣೆ ಹಾಕುವುದು ಸೋತವರನ್ನು ಮೂಲೆಗುಂಪು ಮಾಡುವುದು ಸರಿಯಲ್ಲ. ಪಕ್ಷದ ರಾಜ್ಯ ಘಟಕವನನ್ನು ಸರ್ವಾಧಿಕಾರಿಯಂತೆ ನಡೆಸಲಾಗುತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ