ರಾಜ್ಯದಲ್ಲಿ ಮುಂದುವರೆದ ದರೋಡೆ ಪ್ರಕರಣಗಳು: ಬೆಂಗಳೂರಿನಲ್ಲಿ ಗನ್​ ತೋರಿಸಿ ಬಂಗಾರದ ಅಂಗಡಿ ಲೂಟಿ

Updated on: Jan 27, 2026 | 9:25 PM

ಕರ್ನಾಟಕದಲ್ಲಿ ದರೋಡೆ ಪ್ರಕರಣಗಳು ಮುಂದುವರೆದಿದೆ. ನಿನ್ನೆ ಅಷ್ಟೇ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ನುಗ್ಗಿ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್ ಆಗಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು (ಜನವರಿ 27) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ದರೋಡೆಕೋರರು ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಂಗಳೂರು, (ಜನವರಿ 27): ಕರ್ನಾಟಕದಲ್ಲಿ ದರೋಡೆ ಪ್ರಕರಣಗಳು ಮುಂದುವರೆದಿದೆ. ನಿನ್ನೆ ಅಷ್ಟೇ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ನುಗ್ಗಿ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್ ಆಗಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು (ಜನವರಿ 27) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ದರೋಡೆಕೋರರು ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಗನ್ ತೋರಿಸಿ ರಾಮ್​ದೇವ್ ಜ್ಯುವೆಲ್ಲರಿಗೆ ನುಗ್ಗಿದ್ದು, ಕೈಗೆ ಸಿಕ್ಕ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಖದೀಮರು ಕರಾಮತ್ತು ಸಿಸಿಟಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.