ತುಮಕೂರು: ಕ್ಷೀರ ಭಾಗ್ಯ ಯೋಜನೆಗೆ ದಶಕದ ಸಂಭ್ರಮ, ಮಧುಗಿರಿಯಲ್ಲಿ ಬೃಹತ್ ಸಮಾರಂಭ

ತುಮಕೂರು: ಕ್ಷೀರ ಭಾಗ್ಯ ಯೋಜನೆಗೆ ದಶಕದ ಸಂಭ್ರಮ, ಮಧುಗಿರಿಯಲ್ಲಿ ಬೃಹತ್ ಸಮಾರಂಭ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 06, 2023 | 10:44 AM

ತುಮಕೂರು ಅಲ್ಲದೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಸುಮಾರು ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಒಂದರಲ್ಲಿ ಮಧುಗಿರಿಗೆ ಆಗಮಿಸಲಿದ್ದು ಕಾರ್ಯಕ್ರಮದ ಆಯೊಜನೆಯನ್ನು ಸಚಿವ ಕೆಎನ್ ರಾಜಣ್ಣ ನೋಡಿಕೊಳ್ಳುತ್ತಿದ್ದಾರೆ.

ತುಮಕೂರು: ಸರ್ಕಾರೀ ಮತ್ತು ಅನುದಾನಿತ ಶಾಲೆಗಳಲ್ಲಿ (government and aided schools) ಓದುತ್ತಿರುವ 1 ರಿಂದ 10 ನೇ ತರಗತಿಯ ಮಕ್ಕಳಿಗೆ ವಾರದಲ್ಲಿ 3 ದಿನ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ ಹಾಲು ಒದಗಿಸುವ ಕ್ಷೀರ ಭಾಗ್ಯ ಯೋಜನೆಯನ್ನು (Ksheera Bhagya) ಆಗಸ್ಟ್, 2018ರಲ್ಲಿ ಆಗಿನ ಸಿದ್ದರಾಮಯ್ಯ ಸರ್ಕಾರ (Siddaramaiah government) ಜಾರಿಗೆ ತಂದಿತ್ತು. ಈಗ ಆ ಯೋಜನೆಗೆ ದಶಮಾನೋತ್ಸವ ಭಾಗ್ಯ. ಸುಯೋಗವೆಂದರೆ ಯೋಜನೆ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೂ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದೆ. ಇದೇ ಹಿನ್ನೆಲೆಯಲ್ಲಿ, ಜಿಲ್ಲೆಯ ಮಧುಗಿರಿಯಲ್ಲಿ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳಲಾಗದೆ. ತುಮಕೂರು ಅಲ್ಲದೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಸುಮಾರು ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಒಂದರಲ್ಲಿ ಮಧುಗಿರಿಗೆ ಆಗಮಿಸಲಿದ್ದು ಕಾರ್ಯಕ್ರಮದ ಆಯೊಜನೆಯನ್ನು ಸಚಿವ ಕೆಎನ್ ರಾಜಣ್ಣ ನೋಡಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ