ಚೀನಾದ ಹೆನನ್ ಪ್ರಾಂತ್ಯದಲ್ಲಿ ದಶಕಗಳಲ್ಲೇ ಕಂಡರಿಯದ ಮಳೆ, ಜೆಂಗ್​ಝಾ ನಗರ ಜಲಾವೃತ, ಕನಿಷ್ಟ16 ಸಾವು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2021 | 1:30 AM

ಜೆಂಗ್​ಝಾ ನಗರದಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆಯನ್ನು ಕರೆಸಲಾಗಿದ್ದು ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ನಗರದ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚು.

ಚೀನಾ ದೇಶದ ಕೇಂದ್ರೀಯ ಪ್ರಾಂತ್ಯವಾಗಿರುವ ಹೆನನ್​ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗುತ್ತಿವೆ. ಜೆಂಗ್​ಝಾ ಅಂಡರ್​ಗ್ರೌಂಡ್​ ರೇಲ್ವೇ ವ್ಯವಸ್ಥೆಯು ಸುಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದೆ. ಮಳೆ ಸೃಷ್ಟಿಸಿರುವ ಅವಾಂತರಗಳಿಂದಾಗಿ ಕನಿಷ್ಟ 16 ಜನ ಮೃತಪಟ್ಟಿದ್ದಾರೆಂದು ಚೀನಾದ ಅಧಿಕೃತ ಮೂಲಗಳು ತಿಳಿಸಿವೆ.
ಜೆಂಗ್​ಝಾ ನಗರದಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆಯನ್ನು ಕರೆಸಲಾಗಿದ್ದು ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ನಗರದ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳೆಲೆಲ್ಲ ಕುತ್ತಿಗೆ ಮಟ್ಟ ನೀರು ಹರಿಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದ ಸಬ್​ವೇಗಳಲ್ಲಿ ಜನರು ಹ್ಯಾಂಡ್​ರೇಲ್​ಗಳನ್ನು ಹಿಡಿದುಕೊಂಡು ಜೀವದೊಂದಿಗೆ ಸೆಣಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರದಂದು ಅಪ್​ಲೋಡ್​ ಆಗಿವೆ. ಸುರಕ್ಷಿತ ಪ್ರದೇಶಗಳಲ್ಲಿ ನಿಂತ ಜನ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ದಶಕಗಳಲ್ಲೇ ಕಾಣದಂಥ ಮಳೆ ಹೆನನ್ ಪ್ರಾಂತ್ಯದಲ್ಲಿ ಸುರಿಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ

Published on: Jul 21, 2021 05:12 PM