China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ

ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ.

China Dam Collapse: 24 ಗಂಟೆಯಲ್ಲಿ 18 ಇಂಚು ಮಳೆ; ವರುಣಾರ್ಭಟಕ್ಕೆ ತತ್ತರಿಸಿದ ಐಫೋನ್​ ಸಿಟಿ, ಮುಳುಗುತ್ತಿದೆ ಚೀನಾದ ಹೆನಾನ್ ಪ್ರಾಂತ್ಯ
ಹೆನಾನ್​ ಪ್ರಾಂತ್ಯದ ಒಂದು ದೃಶ್ಯ
Follow us
| Edited By: Lakshmi Hegde

Updated on: Jul 21, 2021 | 2:34 PM

ಜಗತ್ತಿನ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೀಗ ಚೀನಾ (China)ದ ಮಧ್ಯ ಪ್ರಾಂತ್ಯವಾದ ಹೆನಾನ್ (Henan)​​ನ ಝೆಂಗ್​​ಝು(Zhengzhou) ನಗರದಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿಂದ ಸುಮಾರು 2 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ ಮಳೆ ಮತ್ತು ಪ್ರವಾಹ (Flood) ಪರಿಸ್ಥಿತಿಯಿಂದ ಸುಮಾರು12 ಮಂದಿ ಪ್ರಾರಣ ಕಳೆದುಕೊಂಡಿದ್ದಾರೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಝೆಂಗ್​​ಝು ನಗರದಲ್ಲಿ ಕಳೆದ 24ಗಂಟೆಯಲ್ಲಿ 18 ಇಂಚು(457.5ಮಿಮೀ) ಮಳೆಯಾಗಿದೆ ಎಂದರೆ ಅದರ ಭೀಕರತೆ ಎಷ್ಟಿರಬೇಕು ಎಂದು ಲೆಕ್ಕ ಹಾಕಿ. ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ವಾಹನ ಸಂಚಾರ ಸಂಪೂರ್ಣ ನಿಂತಿದೆ. ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸ ಅವಿರತವಾಗಿ ನಡೆಯುತ್ತಿದೆ. ವಿದ್ಯುತ್​ ಇಲ್ಲ, ಬಹುತೇಕ ಎಲ್ಲ ರಸ್ತೆಗಳೂ ಮುಳುಗಿವೆ. ಇದು ತುಂಬ ಗಂಭೀರ ಪರಿಸ್ಥಿತಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಘೋಷಿಸಿದ್ದಾರೆ. ನಗರದ ಅನೇಕ ಜಲಾಶಯಗಳಿಗೆ ಕಟ್ಟಲಾಗಿದ್ದ ಕಟ್ಟಡಗಳು ಒಡೆದಿವೆ. ಅನೇಕರು ಗಾಯಗೊಂಡಿದ್ದಾರೆ. ಜನರ ಜೀವ ಹೋಗುವ ಜತೆ ಅಪಾರ ಪ್ರಮಾಣದ ಬೆಳೆನಾಶವೂ ಆಗಿದೆ ಎಂದೂ ಜಿನ್​ಪಿಂಗ್​ ಹೇಳಿದ್ದಾರೆ.

ಐಫೋನ್​ ಸಿಟಿ ಹೆನಾನ್​ನ ಝೆಂಗ್​ಝು ನಗರದಲ್ಲಿ ವಿಶ್ವದ ಅತಿದೊಡ್ಡ ಐಫೋನ್​ ತಯಾರಿಕಾ ಘಟಕವಿದೆ. ತೈವಾನ್​ನ ಹಾನ್ ಹೈ ಪ್ರಿಸಿಷಿನ್​ ಕಂಪನಿಯ ಒಡೆತನದಲ್ಲಿರುವ ಘಟಕ ಇತ್ತೀಚೆಗೆ ಐಫೋನ್​ ಉತ್ಪಾದನೆ ಹೆಚ್ಚಿಸಲು ಸಕಲ ತಯಾರಿ ಮಾಡುತ್ತಿತ್ತು. ಆದರೀಗ ಪ್ರವಾಹದಿಂದ ಈ ಘಟಕಕ್ಕೂ ಸಂಕಷ್ಟ ಬಂದೊದಗಿದೆ.

ಇದರೊಂದಿಗೆ ಹೆನಾನ್​ ಪ್ರಾಂತ್ಯ ಚೀನಾದಲ್ಲಿ ಎರಡನೇ ದೊಡ್ಡ ಆಹಾರ ಪೂರೈಕೆ ಪ್ರಾಂತ್ಯವಾಗಿದೆ. ದೇಶದಲ್ಲಿ ಒಟ್ಟಾರೆ ಉತ್ಪತ್ತಿಯಾಗುವ ಗೋಧಿಯಲ್ಲಿ ಕಾಲು ಭಾಗ ಈ ಹೆನಾನ್​ ಪ್ರಾಂತ್ಯದಲ್ಲೇ ಉತ್ಪಾದನೆ ಆಗುತ್ತದೆ. ಹಾಗೇ, ಕಲ್ಲಿದ್ದಲು ಮತ್ತು ಲೋಹದ ಪ್ರಮುಖ ಕೇಂದ್ರವೂ ಹೌದು. ಇಲ್ಲಿಗೆ ಒದಗಿರುವ ವಿಪತ್ತಿನಿಂದ ಈಗಾಗಲೇ ಬೆಳೆನಾಶವಾಗಿದ್ದು, ಸಹಜವಾಗಿಯೇ ಚೀನಾ ಸರ್ಕಾರಕ್ಕೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮಠದ ಉತ್ತರಾಧಿಕಾರಿ ನೇಮಿಸಲು ರಾಜಕಾರಣಿಗಳು ಹೋಗಲ್ಲ; ರಾಜಕೀಯಕ್ಕೆ ಮಠಾಧೀಶರು ಬರಬೇಡಿ: ಹೆಚ್.ವಿಶ್ವನಾಥ್

18 inches of rain in 24 hours Heavy Flood in Chinas iPhone city

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್