AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jeff Bezos: ಸುರಕ್ಷಿತವಾಗಿ ಅಂತರಿಕ್ಷಕ್ಕೆ ಹೋಗಿ ಬಂದು ಅನುಭವ ಹಂಚಿಕೊಂಡ ಜೆಫ್​ ಬೆಜೋಸ್​

ಭೂಮಿಯಿಂದ ಸುಮಾರು 62 ಮೈಲು (100 ಕಿಲೋ ಮೀಟರ್) ಎತ್ತರಕ್ಕೆ ಹಾರಿದ ನೌಕೆ ನಂತರ ಭೂಮಿಗೆ ಮರಳಿದೆ. ಈ ಅವಧಿಯಲ್ಲಿ ನೌಕೆಯಲ್ಲಿದ್ದವರಿಗೆ ಕೆಲ ಕಾಲ ಶೂನ್ಯ ಗುರುತ್ವಾಕರ್ಷಣಾ ಶಕ್ತಿಯ ಅನುಭವವಾಗಿದ್ದು, ಇದೊಂದು ಸುಂದರ ಅನುಭವ ಎಂದು ಹೇಳಿಕೊಂಡಿದ್ದಾರೆ.

Jeff Bezos: ಸುರಕ್ಷಿತವಾಗಿ ಅಂತರಿಕ್ಷಕ್ಕೆ ಹೋಗಿ ಬಂದು ಅನುಭವ ಹಂಚಿಕೊಂಡ ಜೆಫ್​ ಬೆಜೋಸ್​
ಜೆಫ್​ ಬೆಜೋಸ್
TV9 Web
| Updated By: Skanda|

Updated on: Jul 21, 2021 | 11:45 AM

Share

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Amazon Founder Jeff Bezos) ಅವರ ಹೊಸ ಸಾಹಸ ಯಶಸ್ವಿಯಾಗಿದೆ. ಅವರೇ ಹುಟ್ಟುಹಾಕಿದ ಬ್ಲೂ ಒರಿಜಿನ್ (Blue Origin) ಸಂಸ್ಥೆಯ ಸಬ್​ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಅಂತರಿಕ್ಷಕ್ಕೆ (Space) ಜಿಗಿದಿದ್ದ ಜೆಫ್ ಬೆಜೋಸ್ ಹಾಗೂ ಸಹಪಯಣಿಗರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆ ಮೂಲಕ ಬಾಹ್ಯಾಕಾಶಕ್ಕೆ ಪ್ರವಾಸ ಏರ್ಪಡಿಸುವ ಬ್ಲೂ ಒರಿಜಿನ್​ ಬಯಕೆಗೆ ಮೊದಲ ಪ್ರಯತ್ನದಲ್ಲೇ ಬಲ ಸಿಕ್ಕಂತಾಗಿದೆ.

ಜೆಫ್ ಬೆಜೋಸ್ ಜತೆ ಅವರ ಸಹೋದರ ಮಾರ್ಕ್​ ಬೆಜೋಸ್​ ಹಾಗೂ ಇತರ ಇಬ್ಬರು ಗಗನ ಯಾತ್ರಿಗಳು ಈ ನೌಕೆಯನ್ನೇರಿದ್ದರು. ಇಡೀ ವಿಶ್ವದ ಗಮನ ಸೆಳೆದಿದ್ದ ಪ್ರಯಾಣ ಇದೀಗ ಯಶಸ್ವಿಯಾಗಿದ್ದು, ಟೆಕ್ಸಾಸ್​ನ ಸ್ಥಳೀಯ ಸಮಯದ ಪ್ರಕಾರ ಮುಂಜಾನೆ 8.22ಕ್ಕೆ ನೌಕೆ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದೆ. ಇದು ಬ್ಲೂ ಒರಿಜಿನ್​ ಸಂಸ್ಥೆಯ ಪ್ರಯೋಗಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಪ್ರಯತ್ನಕ್ಕೆ ಕೈ ಹಾಕಲು ಸಹಕಾರಿಯಾಗಲಿದೆ.

ಜೆಫ್ ಬೆಜೋಸ್ ಜತೆಗೆ ಅವರ ಸಹೋದರ ಮಾರ್ಕ್​ ಬೆಜೋಸ್ ಮತ್ತು ವ್ಯಾಲಿ ಫಂಕ್, ಆಲಿವರ್ ಡೇಮನ್ ಎನ್ನುವವರೂ ಪ್ರಯಾಣದಲ್ಲಿ ಪಾಲ್ಗೊಂಡಿದ್ದು, ಭೂಮಿಯಿಂದ ಸುಮಾರು 62 ಮೈಲು (100 ಕಿಲೋ ಮೀಟರ್) ಎತ್ತರಕ್ಕೆ ಹಾರಿದ ನೌಕೆ ನಂತರ ಭೂಮಿಗೆ ಮರಳಿದೆ. ಈ ಅವಧಿಯಲ್ಲಿ ನೌಕೆಯಲ್ಲಿದ್ದವರಿಗೆ ಕೆಲ ಕಾಲ ಶೂನ್ಯ ಗುರುತ್ವಾಕರ್ಷಣಾ ಶಕ್ತಿಯ ಅನುಭವವಾಗಿದ್ದು, ಇದೊಂದು ಸುಂದರ ಅನುಭವ ಎಂದು ಹೇಳಿಕೊಂಡಿದ್ದಾರೆ.

ನಾನು ಐದು ವರ್ಷದ ಬಾಲಕನಾಗಿದ್ದಾಗಿಂದಲೂ ಅಂತರಿಕ್ಷಕ್ಕೆ ಜಿಗಿಯುವ ಕನಸು ಹೊತ್ತುಕೊಂಡಿದ್ದೆ. ಅಂತಿಮವಾಗಿ ಅದು ಈಡೇರುವ ಸಮಯ ಬಂದಿದ್ದು ನನ್ನ ಸಹೋದರನ ಜತೆ ಆಕಾಶಕ್ಕೆ ಹಾರಲಿದ್ದೇನೆ ಎಂದು ಪ್ರಯಾಣಕ್ಕೂ ಕೆಲ ಸಮಯದ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದ ಜೆಫ್ ಬೆಜೋಸ್, ಈ ಯೋಜನೆಗಾಗಿ ಅಮೆಜಾನ್​ ಸಂಸ್ಥೆಯ ಕೆಲ ಶೇರುಗಳನ್ನೂ ಮಾರಿದ್ದಾರೆ.

ಬ್ಲೂ ಒರಿಜಿನ್​ ತಯಾರಿಸಿದ ಮೊಟ್ಟ ಮೊದಲ ಮಾನವ ಚಾಲಿತ ವಿಮಾನ ಎಂಬ ಕೀರ್ತಿಯನ್ನು ಹೊತ್ತ ನೌಕೆ ಈಗ ಯಶಸ್ಸನ್ನೂ ಮುಡಿಗೇರಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. 60 ಅಡಿ ಎತ್ತರದ ಬೂಸ್ಟರ್‌ ಹಾಗೂ ಆರು ಮಂದಿ ಕೂರಬಹುದಾದ ಕ್ಯಾಪ್ಸೂಲ್‌ ಅನ್ನು ಒಳಗೊಂಡಿದ್ದ ನೌಕೆ, ಭೂಮಿಯಿಂದ 76 ಕಿಲೋ ಮೀಟರ್ ಎತ್ತರಕ್ಕೇರಿದ ನಂತರ ಬೂಸ್ಟರ್‌ ಮತ್ತು ಕ್ಯಾಪ್ಸೂಲ್‌ ಬೇರ್ಪಟ್ಟಿತು. ಈ ವೇಳೆ ಬೂಸ್ಟರ್‌ ನಿಗದಿತ ಸ್ಥಳದಲ್ಲಿ ಇಳಿದರೆ ಕ್ಯಾಪ್ಸೂಲ್‌ 100 ಕಿಲೋ ಮೀಟರ್ ಎತ್ತರಕ್ಕೆ ಹೋದ ಬಳಿಕ ಭೂಮಿಯತ್ತ ಮುಖ ಮಾಡಿತು.

ಈ ಕ್ಯಾಪ್ಸೂಲ್ ಸುಮಾರು 3 ನಿಮಿಷಗಳ ಕಾಲ ಅಂತರಿಕ್ಷದಲ್ಲಿ ತೇಲಿದ್ದು ಅಷ್ಟು ಹೊತ್ತು ಒಳಗಿದ್ದವರು ಶೂನ್ಯ ಗುರುತ್ವಾಕರ್ಷಣೆಯ ಅನುಭವ ಪಡೆದಿದ್ದಾರೆ. ನಂತರ ಕ್ಯಾಪ್ಸೂಲ್‌ ಭೂಮಿಗೆ ಇಳಿದಿದ್ದು, ಏರ್‌ ಬ್ಯಾಗ್‌ ಸಹಾಯದಿಂದ ಹಿಂದಿರುಗಿದೆ. ಕ್ಯಾಪ್ಸೂಲ್‌ ಗಂಟೆಗೆ 1.6 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ಧಾವಿಸಿದ್ದು, ಮೊದಲೇ ಯೋಜಿಸಿದಂತೆ 26 ಕಿಲೋ ಮೀಟರ್ ದೂರದಲ್ಲಿದ್ದಾಗಲೇ ಪ್ಯಾರಾಚ್ಯೂಟ್‌ ತೆರೆದುಕೊಳ್ಳುವ ಮೂಲಕ ಸುರಕ್ಷಿತವಾಗಿ ಹಿಂದಿರುಗಿದೆ.

(Know what happened during Jeff Bezos Blue Origin trip to space)

ಇದನ್ನೂ ಓದಿ: ಜೆಫ್ ಬೆಜೋಸ್​​ನ ಬ್ಲೂ ಒರಿಜಿನ್ ತಂಡದ ಮಹಾರಾಷ್ಟ್ರದ ಮಹಿಳೆ; ಸಂಜಲ್​​ಗಿದು ಕನಸು ನನಸಾದ ಕ್ಷಣ 

ಭೂಮಿಯ ಮೇಲೆ ನಿಗಾ ಇಡಲು ಬಾಹ್ಯಾಕಾಶಕ್ಕೆ ಉಪಗ್ರಹಗಳ ರೂಪದಲ್ಲಿ ಎರಡು ಕಣ್ಣುಗಳನ್ನು ಇಸ್ರೋ ಕಳಿಸಲಿದೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ