Heavy rains in Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ, ಸಮುದಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!
ಕಾರವಾರ ನಗರ ಸೇರಿದಂತೆ ಭಟ್ಕಳ, ಅಂಕೋಲಾ, ಜೋಯಿಡ ಮೊದಲಾದ ಕಡೆಗಳಲ್ಲಿ ಭರ್ಜರಿ ಮಳೆಯಾಗಿದೆ.
ಉತ್ತರ ಕನ್ನಡ: ರಾಜ್ಯದಲ್ಲಿ ಮಳೆಯಾಗಲು ಶುರುವಾಗಿದೆ ಮತ್ತು ನಾಡಿನ ಅದರಲ್ಲೂ ವಿಶೇಷವಾಗಿ ರೈತ ಸಮುದಾಯ (farming community) ಸಂತಸದಿಂದಿದೆ. ಮಳೆಗಾಲ ಶುರುವಾದ (monsoon season) ಎರಡು-ಮೂರು ವಾರ ಬಳಿಕವೂ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದರು, ಬಿತ್ತನೆ ಕಾರ್ಯ ವಿಳಂಬಗೊಳ್ಳತೊಡಗಿತ್ತು. ಆದರೀಗ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ (Uttara Kannada district) ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿದೆ ಮತ್ತು ಕಾರವಾರದಲ್ಲಿ ವರುಣ ಆರ್ಭಟಿಸುತ್ತಿರುವುದನ್ನು ಇಲ್ಲಿ ನೋಡಬಹುದು. ಕಾರವಾರ ನಗರ ಸೇರಿದಂತೆ ಭಟ್ಕಳ, ಅಂಕೋಲಾ, ಜೋಯಿಡ ಮೊದಲಾದ ಕಡೆಗಳಲ್ಲಿ ಭರ್ಜರಿ ಮಳೆಯಾಗಿದೆ. ಮಳೆ ಜೋರಾಗಿ ಸುರಿಯುತ್ತಿರುವುದರಿಂದ ಮೀನಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos