Karnataka Bandh: ಮೈಸೂರಲ್ಲಿ ಕರ್ನಾಟಕ ಬಂದ್ ಗೆ ಭಾರೀ ಬೆಂಬಲ, ನಿರ್ಜನ ರಸ್ತೆಗಳಲ್ಲಿ ಕೇವಲ ಪೊಲೀಸರು!
ಪ್ರತಿಭಟನೆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿರುವ ವಾಹನಗಳ ಕಲ್ಲು ತೂರಾಟ ನಡೆಯಬಹುದಾದ ಸಾಧ್ಯತೆ ಮತ್ತು ಇತರ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಬಸ್ ನಿಲ್ದಾಣ ಒಂದು ಕೋಟೆಯಂತೆ ಗೋಚರಿಸುತ್ತಿದೆ.
ಮೈಸೂರು: ಕನ್ನಡ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ (Karnataka Bandh) ಮೈಸೂರು ಜಿಲ್ಲೆಯಲ್ಲಿ ಭಾರೀ ಬೆಂಬಲ ಸಿಕ್ಕಿದೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಹೇಳುವಂತೆ ಮೈಸೂ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಜಿಲ್ಲೆಯದ್ಯಾಂತ ಶಾಲಾ ಕಾಲೇಜುಗಳನ್ನು (school-colleges) ಬಂದ್ ಮಾಡಲಾಗಿದೆ. ಹೋಟೆಲ್ ಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಕಾವೇರಿ ನದಿ ನೀರಿನ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ವಿಡಿಯೋದಲ್ಲಿ ಕಾಣುತ್ತಿರೋದು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ (Mysuru Rural Bus Stop), ನಗರ ಹಾಗೂ ಬೆಂಗಳೂರು ನಡುವೆ ಚಲಿಸುವ ಬಸ್ ಗಳು ಇಲ್ಲಿಂದಲೇ ಹೊರಡುತ್ತವೆ. ಹಾಗಾಗಿ, ಸದಾ ಜನರಿಂದ ಗಿಜಿಗಿಡುವ ನಿಲ್ದಾಣ ಇವತ್ತು ಪ್ರಯಾಣಕರ ಓಡಾಟವಿಲ್ಲದೆ ಭಣಗುಡುತ್ತಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಿಲ್ದಾಣದ ಬಳಿ ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತೇವೆ ಅಂತ ಹೇಳಿದ್ದರಿಂದ ಜನ ಇತ್ತ ಸುಳಿದಾಡುತ್ತಿಲ್ಲ. ಪ್ರತಿಭಟನೆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿರುವ ವಾಹನಗಳ ಕಲ್ಲು ತೂರಾಟ ನಡೆಯಬಹುದಾದ ಸಾಧ್ಯತೆ ಮತ್ತು ಇತರ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಬಸ್ ನಿಲ್ದಾಣ ಒಂದು ಕೋಟೆಯಂತೆ ಗೋಚರಿಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ