ಮತ್ತೆ ಸಿನಿಮಾ ಮಾಡ್ತಾರೆ ಮಾಸ್ಟರ್ ಮಂಜುನಾಥ್; ಆದ್ರೆ ಇಲ್ಲಿದೆ ಒಂದು ದೊಡ್ಡ ಟ್ವಿಸ್ಟ್
Master Manjunath: ಮಾಸ್ಟರ್ ಮಂಜುನಾಥ್ ಅವರು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದ್ದಾರೆ. ಅದು ಹೇಗೆ ಎಂಬ ಬಗ್ಗೆಯೂ ಅವರು ವಿವರಿಸಿದ್ದಾರೆ.
ಹಲವು ವರ್ಷಗಳಿಂದ ಖ್ಯಾತ ನಟ ಮಾಸ್ಟರ್ ಮಂಜುನಾಥ್ (Master Manjunath) ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಬಾಲ ನಟನಾಗಿ ಅನೇಕ ಸಿನಿಮಾಗಳಲ್ಲಿ (Master Manjunath Movies) ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಅವರು ನಂತರದ ದಿನಗಳಲ್ಲಿ ನಟನೆಯಲ್ಲಿ ಮುಂದುವರಿಯಲಿಲ್ಲ. ಆ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದೆ. ಶಂಕರ್ ನಾಗ್ (Shankar Nag) ಅವರಂತಹ ಲೆಜೆಂಡರಿ ನಟರ ಜೊತೆ ಕೆಲಸ ಮಾಡಿದ ಅನುಭವವನ್ನು ಇಟ್ಟುಕೊಂಡಿರುವ ಮಾಸ್ಟರ್ ಮಂಜುನಾಥ್ ಅವರು ಮತ್ತೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುತ್ತಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅವರು ನಟನಾಗಿ ಮತ್ತೆ ಕ್ಯಾಮೆರಾ ಮುಂದೆ ನಿಲ್ಲುವ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಬದಲಿಗೆ, ನಿರ್ದೇಶಕನಾಗಿ ಒಂದು ಪ್ರಯತ್ನ ಮಾಡಲು ಅವರು ಸಜ್ಜಾಗುತ್ತಿದ್ದಾರೆ. ಈ ಕುರಿತು ‘ಟಿವಿ9 ಕನ್ನಡ’ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಅನೇಕ ವಿಚಾರಗಳ ಕುರಿತಾಗಿಯೂ ಮಾಸ್ಟರ್ ಮಂಜುನಾಥ್ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.