ಔಟಾದ ಹತಾಶೆ; ಚೆಂಡಿನ ಬದಲು ಹೆಲ್ಮೆಟ್​ ಅನ್ನು ಸಿಕ್ಸರ್​ಗಟ್ಟಿದ ಟಿ20 ವಿಶ್ವಕಪ್ ಹೀರೋ

Carlos Brathwaite: ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್​ವೈಟ್ ಕೋಪದಿಂದ ಚೆಂಡಿನ ಬದಲು ತನ್ನ ಹೆಲ್ಮೆಟ್ ಅನ್ನು ಬ್ಯಾಟ್​ನಿಂದ ಹೊಡೆದು ಸಿಕ್ಸರ್​ಗಟ್ಟಿದರು. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Follow us
|

Updated on:Aug 25, 2024 | 10:24 PM

ವಿಶ್ವದಾದ್ಯಂತ ನಾನಾ ಲೀಗ್​ಗಳನ್ನು ಆಡಲಾಗುತ್ತಿದೆ. ಇದರಲ್ಲಿ Max60 ಕೆರಿಬಿಯನ್ ಲೀಗ್​ ಕೂಡ ಒಂದಾಗಿದೆ. ತಲಾ 60 ಎಸೆತಗಳ ಈ ಪಂದ್ಯ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡುತ್ತಿದೆ. ಈ ಲೀಗ್​ನಲ್ಲಿ ಈಗಾಗಲೇ ಲೀಗ್ ಹಂತ ಮುಗಿದಿದ್ದು, ಇದೀಗ ಸೂಪರ್-3 ಸುತ್ತಿನ ಪಂದ್ಯ ನಡೆಯುತ್ತಿದೆ. ಈ ಸುತ್ತಿನಲ್ಲಿ ಇಂದು ನ್ಯೂಯಾರ್ಕ್ ಸ್ಟ್ರೈಕರ್ಸ್ ಮತ್ತು ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದ ವೇಳೆ ವಿಚಿತ್ರ ಘಟನೆಯೊಂದು ಕಂಡುಬಂದಿದ್ದು, ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್​ವೈಟ್ ಕೋಪದಿಂದ ಚೆಂಡಿನ ಬದಲು ತನ್ನ ಹೆಲ್ಮೆಟ್ ಅನ್ನು ಬ್ಯಾಟ್​ನಿಂದ ಹೊಡೆದು ಸಿಕ್ಸರ್​ಗಟ್ಟಿದರು. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೆಸ್ಟ್ ಇಂಡೀಸ್​ನ ಮಾಜಿ ಆಲ್ ರೌಂಡರ್ ಕಾರ್ಲೋಸ್ ಬ್ರಾಥ್​ವೈಟ್, ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡದ ಜೋಶ್ ಲಿಟಲ್ ಎಸೆತದಲ್ಲಿ ಕ್ಯಾಚ್ ಔಟಾದರು. ಆದರೆ ಬ್ರಾಥ್​ವೈಟ್ ಪ್ರಕಾರ ಚೆಂಡು ಅವರ ಬ್ಯಾಟಿಗೆ ತಾಗಿರಲಿಲ್ಲ. ಆದಾಗ್ಯೂ ಅಂಪೈರ್ ಬ್ರಾಥ್​ವೈಟ್ ಔಟೆಂದು ತೀರ್ಪು ನೀಡಿದರು. ಅಂಪೈರ್ ಅವರ ಈ ನಿರ್ಣಯದಿಂದ ತಾಳ್ಮೆ ಕಳೆದುಕೊಂಡ ಬ್ರಾಥ್‌ವೈಟ್, ಬ್ಯಾಟ್‌ನಿಂದ ತನ್ನ ಹೆಲ್ಮೆಟ್‌ಗೆ ಜೋರಾಗಿ ಹೊಡೆದರು, ಅದು ನೇರವಾಗಿ ಬೌಂಡರಿ ಹೊರಗೆ ಹೀಗಿ ಬಿದ್ದಿತು.

ಟಿ20 ವಿಶ್ವಕಪ್ ಹೀರೋ ಕಾರ್ಲೋಸ್ ಬ್ರಾಥ್‌ವೈಟ್

2016ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಚಾಂಪಿಯನ್‌ ಮಾಡಿದ್ದು ಇದೇ ಕಾರ್ಲೋಸ್‌ ಬ್ರಾಥ್‌ವೈಟ್‌. ಕಾರ್ಲೋಸ್ ಬ್ರಾಥ್‌ವೈಟ್ ಫೈನಲ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್‌ನಿಂದ ಜಯವನ್ನು ಕಸಿದುಕೊಂಡಿದ್ದರು. ಕಾರ್ಲೋಸ್ ಬ್ರಾಥ್‌ವೈಟ್ ವೆಸ್ಟ್ ಇಂಡೀಸ್ ಪರ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 3 ಟೆಸ್ಟ್, 44 ಏಕದಿನ ಮತ್ತು 41 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 1050 ರನ್ ಮತ್ತು 75 ವಿಕೆಟ್‌ಗಳನ್ನು ಕಬಳಿಸಿದ್ದರು.

Published On - 10:23 pm, Sun, 25 August 24