ಕುಡಿದ ಮತ್ತಲ್ಲಿ ಅಪಘಾತ ಮಾಡಿ ನಟ ಮಯೂರ್ ಪಟೇಲ್ ಹೇಳಿದ್ದೇನು?
Mayur Patel Car Accident Video: ಮಯೂರ್ ಪಟೇಲ್ ಅವರು ಕಾರು ಅಪಘಾತ ಮಾಡಿದ್ದಾರೆ. ದೊಮ್ಮಲೂರು ಸಮೀಪದ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಮಯೂರ್ ಕುಡಿದು ಕಾರು ಓಡಿಸುತ್ತಿದ್ದರು. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ ಎಂದು ತಿಳಿದು ಬಂದಿದೆ.
ಕನ್ನಡದ ನಟ ಮಯೂರ್ ಪಟೇಲ್ ಚರ್ಚೆಯಲ್ಲಿದ್ದಾರೆ. ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಅಪಘಾತ ಮಾಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿ ಈ ಅಪಘಾತ ನಡೆದಿದೆ. ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಮಯೂರ್ ಅವರ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಆ ಬಳಿಕ ಅವರು ಡ್ರೈವರ್ ಬಳಿ ಮಾತನಾಡಿದ್ದಾರೆ. ನಾನು ಕಾರು ಸರಿ ಮಾಡಿಸಿಕೊಡ್ತೀನಿ’ ಎಂದಿದ್ದಾರೆ. ಈ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 29, 2026 08:40 AM

