‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’

‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’

ಮಂಜುನಾಥ ಸಿ.
|

Updated on: Jul 03, 2024 | 10:55 AM

‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಗಮನ ಸೆಳೆದು ಸಿನಿಮಾ ನಟಿಯಾಗಿಯೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಮಯೂರಿ, ಮದುವೆಯ ಬಳಿಕ ಚಿತ್ರರಂಗದಿಂದ ತುಸು ದೂರಾಗಿದ್ದರು. ಈಗ ಮತ್ತೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ನಟನಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಯೂರಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿದ್ದರು. ಮುದ್ದು ಮುಖ, ಉತ್ತಮ ನಟನೆಯಿಂದ ಸಿನಿಮಾ ಮಂದಿಯ ಗಮನ ಸೆಳೆದಿದ್ದ ಮಯೂರಿ ಸಿನಿಮಾ ನಟಿಯಾಗಿಯೂ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಮದುವೆಯಾಗಿ, ತಾಯಿಯಾಗಿ ಕೌಟುಂಬಿಕ ಜವಾಬ್ದಾರಿ ನಿರ್ವಹಿಸುವುದರಲ್ಲಿ ಬ್ಯುಸಿಯಾದ ಮಯೂರಿ ಈಗ ಮತ್ತೊಮ್ಮೆ ಕಿರುತೆರೆಗೆ ಬಂದಿದ್ದಾರೆ. ‘ನನ್ನ ದೇವ್ರು’ ಹೆಸರಿನ ಹೊಸ ಧಾರಾವಾಹಿಯಲ್ಲಿ ಮಯೂರಿ ಕ್ಯಾತರಿ ನಟಿಸುತ್ತಿದ್ದಾರೆ. ತಾಯಿಯಾಗಿ ದೊಡ್ಡ ಜವಾಬ್ದಾರಿಯನ್ನೇ ಹೊತ್ತಿರುವ ಮಯೂರಿ, ಕೌಟುಂಬಿಕ ಜವಾಬ್ದಾರಿಯ ನಡುವೆ ಧಾರಾವಾಹಿ ನಟನೆಯನ್ನು ಹೇಗೆ ತೂಗಿಸಿಕೊಂಡು ಹೋಗುವ ಯೋಜನೆ ಇದೆ ಎಂಬ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ