ಮೈಸೂರಿನ ಪ್ರವಾಸಿ ತಾಣಗಳಲ್ಲಿ ಕೋವಿಡ್ ಜೆಎನ್.1 ಸೋಂಕಿನ ಜಾಗೃತಿ ಮೂಡಿಸುವ ಕೆಲಸ ಜಾರಿಯಲ್ಲಿದೆ: ಪಿಸಿ ಕುಮಾರಸ್ವಾಮಿ, ಡಿಹೆಚ್ಓ
ಕೇರಳದಲ್ಲಿ ಜೆಎನ್.1 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆ ರಾಜ್ಯಕ್ಕೆ ಹೊಂದಿಕೊಂಡಿರುವಂಥ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ 3—4 ಆರೋಗ್ಯಾಧಿಕಾರಿಗಳಿರುವ ತಂಡಗಳನ್ನು ರಚಿಸಿ ಪರಿಸ್ಥಿತಿಯನ್ನು ಮಾನಿಟರ್ ಮಾಡಲು ಹೇಳಲಾಗಿದೆ ಎಂದು ಮೈಸೂರು ಡಿಹೆಚ್ ಓ ಕುಮಾರಸ್ವಾಮಿ ಹೇಳಿದರು. ಸುರಕ್ಷಿತ ಅಂತರ, ಮೂರು ಲೇಯರ್ ಉಳ್ಳ ಮಾಸ್ಕ್ ಧರಿಸುವುದು, ಪದೇಪದೆ ಕೈತೊಳೆಯುವುದು ಮತ್ತು ಕಾದಾರಿದ ನೀರನ್ನು ಕುಡಿಯುವಂತೆ ಜನರಿಗೆ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರು ಜಗದ್ವಿಖ್ಯಾತ ಪ್ರವಾಸಿ ತಾಣವೂ (popular tourist place) ಆಗಿದ್ದು, ಬೇರೆ ಬೇರೆ ರಾಜ್ಯಗಳು ಹಾಗೂ ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿ ಅಗಮಿಸುವುದರಿಂದ ಹೆಚ್ಚುತ್ತಿರುವ ಕೋವಿಡ್ ಜೆಎನ್.1 (Covid JN.1) ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪಿಸಿ ಕುಮಾರಸ್ವಾಮಿ (PN Kumaraswamy) ಹೇಳುತ್ತಾರೆ. ಟಿವಿ9 ಮೈಸೂರು ಪ್ರತಿನಿಧಿ ರಾಮ್ ಅವರೊಂದಿಗೆ ಮಾತಾಡಿರುವ ಕುಮಾರಸ್ವಾಮಿ, ಅರಮನೆ, ಬೃಂದಾವನ ಸೇರಿದಂತೆ ನಗರದ ಎಲ್ಲ ಪ್ರಸಿದ್ಧ ತಾಣಗಳಲ್ಲಿ ಆರೋಗ್ಯ ಅಧಿಕಾರಿಗಳು ಮತ್ತು ಇಲಾಖೆಯ ಇತರ ಸಿಬ್ಬಂದಿಯಿಂದ ಪ್ರವಾಸಿಗರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಮತ್ತು ರೋಗಲಕ್ಷಣಗಳ ಬಗ್ಗ್ಗೆ ಅವರಿಗೆ ವಿವರಿಸಲಾಗುತ್ತಿದೆ ಎಂದು ಹೇಳಿದರು. ಪ್ರವಾಸಿಗರ ಆರೋಗ್ಯ ಪರೀಕ್ಷಣೆ ನಡೆಸುವುದನ್ನು ಇನ್ನೂ ಆರಂಭಿಸಿಲ್ಲ ಎಂದು ಹೇಳಿದ ಡಿಹೆಚ್ಒ, ಅವರ ಪೈಕಿ ಯಾರಾದರೂ ಕೆಮ್ಮು, ನೆಗಡಿ, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರೆ ಅವರ ಟೆಸ್ಟಿಂಗ್ ನಡೆಸಲಾಗುವುದು ಮತ್ತು ಶೀತ ಹಾಗೂ ಜ್ವರ ತೀವ್ರವಾಗಿದ್ದರೆ ಚಿಕಿತ್ಸೆ ಎಲ್ಲಿ ಲಭವಿದೆ ಅಂತ ಅವರಿಗೆ ತಿಳಿಸಲಾಗುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ