ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ
ನಾಮಕರಣ ಸಮಾರಂಭದ ವೇಳೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ನಿರಂತರವಾಗಿ ಅಳುತ್ತಿದ್ದ. ಯಾರ ಬಳಿ ಹೋದರೂ ಆತನಿಗೆ ಸಮಾಧಾನ ಆಗುತ್ತಿರಲಿಲ್ಲ.
ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ಶುಕ್ರವಾರ (ಸೆ.3) ನಾಮಕರಣ ಮಾಡಲಾಯಿತು. ಧ್ರುವ ಸರ್ಜಾ, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಧ್ರುವ ಪತ್ನಿ ಪ್ರೇರಣಾ, ಪ್ರಜ್ವಲ್ ದೇವರಾಜ್, ಅವರ ಪತ್ನಿ ರಾಗಿಣಿ ಚಂದ್ರನ್ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ವೇಳೆ ರಾಯನ್ ನಿರಂತರವಾಗಿ ಅಳುತ್ತಿದ್ದ. ಯಾರ ಬಳಿ ಹೋದರೂ ಆತನಿಗೆ ಸಮಾಧಾನ ಆಗುತ್ತಿರಲಿಲ್ಲ. ಕೊನೆಗೂ ತಾತ ಸುಂದರ್ ರಾಜ್ ಅವರು ಚಿರಂಜೀವಿ ಸರ್ಜಾ ಫೋಟೋ ತೋರಿಸುತ್ತಿದ್ದಂತೆಯೇ ರಾಯನ್ ಅಳು ನಿಲ್ಲಿಸಿದ.
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ. ‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ. ಅದನ್ನು ಮೇಘನಾ ರಾಜ್ ವಿವರಿಸಿದ್ದಾರೆ. ‘ರಾಯನ್ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್ ಹೇಳಿದರು.
ಇದನ್ನೂ ಓದಿ:
‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್ ನೇರ ಮಾತು
ಚರ್ಚ್ನಲ್ಲಿ ಚಿರು-ಮೇಘನಾ ರಾಜ್ ಪುತ್ರನ ನಾಮಕರಣ; ಕ್ರೈಸ್ತ ಸಂಪ್ರದಾಯದ ವಿಡಿಯೋ ಇಲ್ಲಿದೆ