ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸನ್ನು ಔರಂಗಾಬಾದ್ ನಲ್ಲಿ ಅಡ್ಡಗಟ್ಟಿ ಮರಾಠಿಗರ ಪುಂಡಾಟಿಕೆ
ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸೊಂದನ್ನು ಗ್ರಾಮದಲ್ಲಿ ಅಡ್ಡಗಟ್ಟಿ ವಾಹನದ ಮೇಲೆ ಜೈ ಮಹಾರಾಷ್ಟ್ರ ಅಂತೆಲ್ಲ ಕಪ್ಪು ಮಸಿಯಿಂದ ಬರೆದಿದ್ದಾರೆ.
ಮರಾಠಿಗರ ಪುಂಡಾಟಿಕೆ ದಿನಗಳೆದಂತೆ ಹೆಚ್ಚುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಅದನ್ನು ನಾವು ಪದೇಪದೆ ನೋಡುತ್ತಿರುತ್ತೇವೆ. ಇವತ್ತು ಮಹಾರಾಷ್ಟ್ರ ಔರಂಗಾಬಾದ್ (Aurangabad) ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಅಖಿಲ ಭಾರತ ಮರಾಠಾ ಸಂಘದ ಕಾರ್ಯಕರ್ತರು ಪ್ರದರ್ಶಿಸಿರುವ ಪುಂಡಾಟಿಕೆ ಮತ್ತು ಬಾಲಿಷತನವನನ್ನು ಒಮ್ಮೆ ಗಮನಿಸಿ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸೊಂದನ್ನು ಗ್ರಾಮದಲ್ಲಿ ಅಡ್ಡಗಟ್ಟಿ ವಾಹನದ ಮೇಲೆ ಜೈ ಮಹಾರಾಷ್ಟ್ರ ಅಂತೆಲ್ಲ ಕಪ್ಪು ಮಸಿಯಿಂದ ಬರೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Nov 25, 2022 10:57 AM