Loading video

ನಾಮಪತ್ರ ಸಲ್ಲಿಸುವಾಗ ಎದುರಾದ ಡಾ ಮಂಜುನಾಥ್​ಗೆ ವಿಶ್ ಮಾಡಿ ಶುಭ ಹಾರೈಸಿದೆ: ಡಿಕೆ ಸುರೇಶ್

|

Updated on: Apr 04, 2024 | 1:08 PM

ನಾಮಪತ್ರ ಸಲ್ಲಿಸುವಾಗ ಡಾ ಮಂಜುನಾಥ್ ಅವರು ಭೇಟಿಯಾಗಿದ್ದರು, ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದೆ ಎಂದು ಸುರೇಶ್ ಹೇಳಿದರು. ಬರೀ ಅಷ್ಟು ಮಾತ್ರ ಹೇಳಿದ್ದಾ ಸರ್? ಅಂತ ಪತ್ರಕರ್ತರು ಕೇಳಿದಾಗ ಬೇರೇನು ಮಾತಾಡೊಕ್ಕಾಗುತ್ತೆ ಅನ್ನುತ್ತಾ ಸುರೇಶ್ ಮುಗುಳ್ನಕ್ಕರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Rural Seat) ಇಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಭರಾಟೆ. ಬಿಜೆಪಿಯ ಡಾ ಸಿಎನ್ ಮಂಜುನಾಥ್ (Dr CN Manjunath) ಅವರು ತಮ್ಮ ನಾಮಪತ್ರ ಸಲ್ಲಿಸುವ ವೇಳೆಯೇ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಸಂಸದ ಡಿಕೆ ಸುರೇಶ್ (DK Suresh) ಸಹ ತಮ್ಮ ನಾಮಿನೇಷನ್ ಪೇಪರ್ಸ್ ದಾಖಲಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್ ಇವತ್ತು ಒಳ್ಳೇ ಗಳಿಗೆ ಮತ್ತು ಶುಭ ಮುಹೂರ್ತವಾಗಿದ್ದ ಕಾರಣ ನಾಮಪತ್ರ ಸಲ್ಲಿಸಿದ್ದೇನೆ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರ ಕಾರ್ಯವೂ ಆರಂಭವಾಗಿದೆ ಎಂದು ಹೇಳಿದರು. ನಾಮಪತ್ರ ಸಲ್ಲಿಸುವಾಗ ಡಾ ಮಂಜುನಾಥ್ ಅವರು ಭೇಟಿಯಾಗಿದ್ದರು, ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದೆ ಎಂದು ಸುರೇಶ್ ಹೇಳಿದರು. ಬರೀ ಅಷ್ಟು ಮಾತ್ರ ಹೇಳಿದ್ದಾ ಸರ್? ಅಂತ ಪತ್ರಕರ್ತರು ಕೇಳಿದಾಗ ಬೇರೇನು ಮಾತಾಡೊಕ್ಕಾಗುತ್ತೆ ಅನ್ನುತ್ತಾ ಸುರೇಶ್ ಮುಗುಳ್ನಕ್ಕರು. ಬಿಸಿಲಿನ ಝಳ ಹೆಚ್ಚುತ್ತಿದೆ, ಆದರೆ ಕಾರ್ಯಕರ್ತರ ಉತ್ಸಾಹ ತಗ್ಗಿಲ್ಲ ಎಲ್ಲರೂ ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆ ಸಹೋದರರು ಮಾಡುವ ಟೀಕೆಗಳಿಗೆ ಮತದಾರರೇ ಉತ್ತರ ನೀಡಲಿದ್ದಾರೆ: ಡಾ ಸಿಎನ್ ಮಂಜುನಾಥ್