ಕಲರ್​ಫುಲ್ ಲೈಟ್​ನಿಂದ ಜಗಮಗಿಸುತ್ತಿರುವ MG ರೋಡ್​; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Dec 31, 2023 | 10:04 PM

ಹೊಸ ವರ್ಷಾಚರಣೆಗೆ ವೆಲ್ಕಮ್ ಮಾಡಲು ಎಂಜಿ ರೋಡ್(MG Road)​ನ ಪಬ್​ಗಳು ಸಜ್ಜಾಗಿದ್ದು, ಜಗ ಮಗಿಸುವ ಎಲ್ ಇಡಿ ಲೈಟ್ ನೊಂದಿಗೆ ಸಿದ್ದವಾಗಿದೆ. ಈ ಕುರಿತು ಮಾತನಾಡಿದ ಪಬ್ ಮ್ಯಾನೇಜರ್ ‘ಕಲರ್ ಕಲರ್ ಬಲೂನ್​ಗಳು ಡಿಜೆ ವ್ಯವಸ್ಥೆ ಸೇರಿದಂತೆ ಸರ್ಕಾರದ ರೂಲ್ಸ್ ಪಾಲಿಸಿಕೊಂಡು ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದೇವೆ ಎಂದರು.

ಬೆಂಗಳೂರು, ಡಿ.31: ಹೊಸ ವರ್ಷಾಚರಣೆಗೆ ವೆಲ್ಕಮ್ ಮಾಡಲು ಎಂಜಿ ರೋಡ್(MG Road)​ನ ಪಬ್​ಗಳು ಸಜ್ಜಾಗಿದ್ದು, ಜಗ ಮಗಿಸುವ ಎಲ್ ಇಡಿ ಲೈಟ್ ನೊಂದಿಗೆ ಸಿದ್ದವಾಗಿದೆ. ಈ ಕುರಿತು ಮಾತನಾಡಿದ ಪಬ್ ಮ್ಯಾನೇಜರ್ ‘ಕಲರ್ ಕಲರ್ ಬಲೂನ್​ಗಳು ಡಿಜೆ ವ್ಯವಸ್ಥೆ, ಮಹಿಳೆಯರ ರಕ್ಷಣೆಗಾಗಿ 16 ಲೇಡಿ ಬೌನ್ಸರ್​ಗಳು,  ಪಬ್ ಒಳಗೆ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಮಾಡಿಕೊಂಡಿದ್ದೀವಿ. ಸರ್ಕಾರದ ರೂಲ್ಸ್ ಪಾಲಿಸಿಕೊಂಡು ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದೇವೆ. ಈ ಬಾರಿ ಕೊರೊನಾ ಕಮ್ಮಿ ಆಗಿರುವ ಕಾರಣ ತುಂಬಾ ಸಂತೋಷ ದಿಂದ ಸಂಭ್ರಮಕ್ಕಾಗಿ ಕಾಯುತ್ತಿದ್ದೇವೆ. ಕಡಿಮೆ ದರದಲ್ಲಿ ಮದ್ಯ ಮತ್ತು ಅನಿಯಮಿತ ಊಟದ ವ್ಯವಸ್ಥೆ ‌ಮಾಡಿದ್ದೀವಿ, ಈಗಾಗಲೇ ‌35% ರಷ್ಟು ಸೀಟ್ ಬುಕ್ಕಿಂಗ್ ಆಗಿದೆ. ಡ್ಯಾನ್ಸ್ ಫ್ಲೋರ್ ಡಿಜೆ ವ್ಯವಸ್ಥೆ ಕೂಡ ಮಾಡಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
TV9 Web

TV9 Kannada

Read More