‘ಬಿಗ್​ ಬಾಸ್​ನಲ್ಲಿ ಮೊದಲಿಗೆ ನನ್ನನ್ನು ಜಾಸ್ತಿ ತೋರಿಸಿಲ್ಲ’: ಕಾರಣ ತಿಳಿಸಿದ ಮೈಕಲ್​ ಅಜಯ್​

Edited By:

Updated on: Jan 09, 2024 | 2:34 PM

ಮೈಕಲ್​ ಅಜಯ್​ ಅವರಿಗೆ ಚೆನ್ನಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಬಿಗ್​ ಬಾಸ್​ಗೆ ಬಂದ ಬಳಿಕ ಅವರು ಕಲಿಯುವ ಪ್ರಯತ್ನ ಮಾಡಿದರು. ಅದಕ್ಕೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಮೊದಲಿಂದಲೇ ಈ ಪ್ರಯತ್ನ ಇದ್ದಿದ್ದರೆ ಫಿನಾಲೆ ತಲುಪಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊನೆ ಹಂತದಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ.

ನೈಜೀರಿಯಾ ಕನ್ನಡಿಗ ಮೈಕಲ್​ ಅಜಯ್​ (Michael Ajay) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ರಿಯಾಲಿಟಿ ಶೋನಿಂದ ಎಲಿಮಿನೇಟ್​ ಆಗಿದ್ದಾರೆ. ಎಲಿಮಿನೇಷನ್​ ಬಳಿಕ ‘ಟಿವಿ9’ ಜೊತೆ ಅವರು ಮಾತನಾಡಿದ್ದಾರೆ. ಆರಂಭದಲ್ಲಿ ಮೈಕಲ್​ ಅವರಿಗೆ ಚೆನ್ನಾಗಿ ಕನ್ನಡ (Kannada) ಮಾತನಾಡಲು ಬರುತ್ತಿರಲಿಲ್ಲ. ಬಳಿಕ ಅವರು ಕಲಿಯುವ ಪ್ರಯತ್ನ ಮಾಡಿದರು. ಅದಕ್ಕೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಆರಂಭದಿಂದಲೇ ಈ ಪ್ರಯತ್ನ ಇದ್ದಿದ್ದರೆ ಫಿನಾಲೆ ತಲುಪಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಮೊದಲಿಗೆ ನನ್ನ ಕನ್ನಡ ಅಷ್ಟು ಚೆನ್ನಾಗಿ ಇರಲಿಲ್ಲ. ಹಾಗಾಗಿ ಜಾಸ್ತಿ ಮಾತಾಡೋಕೆ ಆಗಲಿಲ್ಲ. ಹೊರಗೆ ಬಂದ ಬಳಿಕ ನನಗೆ ಗೊತ್ತಾಗಿದ್ದು ಏನೆಂದರೆ, ಆ ಟೈಮ್​ನಲ್ಲಿ ನನ್ನನ್ನು ಜಾಸ್ತಿ ತೋರಿಸಿಲ್ಲ. ನಾನು ಕನ್ನಡ ಜಾಸ್ತಿ ಮಾತಾಡಿದಾಗ ನನ್ನನ್ನು ಜಾಸ್ತಿ ತೋರಿಸಲು ಶುರು ಮಾಡಿದರು. ಆಗ ಜನರಿಗೆ ಇಂಟರೆಸ್ಟ್​ ಶುರುವಾಯಿತು’ ಎಂದು ಮೈಕಲ್​ ಅಜಯ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More