Micromax In Note 2: ಗಣ ರಾಜ್ಯೋತ್ಸವ ಪ್ರಯುಕ್ತ ಬಿಡುಗಡೆ ಆಗುತ್ತಿದೆ ಭಾರತದ ಹೊಸ ಸ್ಮಾರ್ಟ್​ಫೋನ್

| Updated By: Vinay Bhat

Updated on: Jan 24, 2022 | 2:25 PM

ಗಣ ರಾಜ್ಯೋತ್ಸವದ ಪ್ರಯುಕ್ತ ಇದೇ ಜನವರಿ 25 ರಂದು ಭಾರತದಲ್ಲಿ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 (Micromax IN Note 2) ಫೋನ್‌ ಬಿಡುಗಡೆಗೆಗೊಳ್ಳಲಿದೆ.

ಚೀನಾ ಮೂಲದ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಮೈಕ್ರೋಮ್ಯಾಕ್ಸ್ ಭಾರತದಲ್ಲಿ ಹೊಸ ಫೋನ್ ಲಾಂಚ್​ಗೆ ಸಿದ್ಧತೆ ನಡೆಸಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ ಇದೇ ಜನವರಿ 25 ರಂದು ಭಾರತದಲ್ಲಿ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 (Micromax IN Note 2) ಫೋನ್‌ ಬಿಡುಗಡೆಗೆಗೊಳ್ಳಲಿದೆ. ಮೂಲಗಳ ಪ್ರಕಾರ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 6.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇದು ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಬಲವನ್ನು ಪಡೆದಿರುವ ಸಾಧ್ಯತೆ ಇದೆಯಂತೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರುವ ಸಾದ್ಯತೆ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಆಗಲಿದೆ.