Love You Rachchu: ‘ಲವ್​ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ

Edited By:

Updated on: Dec 30, 2021 | 12:23 PM

Milana Nagaraj | Darling Krishna: ‘ಲವ್ ಯೂ ರಚ್ಚು’ ಚಿತ್ರದ ಪ್ರೀಮಿಯರ್​ನಲ್ಲಿ ತಾರಾ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಏನೇನು ಇಷ್ಟವಾಯಿತು ಎನ್ನುವುದನ್ನು ಅವರು ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್ ತಾರಾ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ‘ಲವ್ ಯೂ ರಚ್ಚು’ ಚಿತ್ರದ ಪ್ರೀಮಿಯರ್​ನಲ್ಲಿ ಭಾಗವಹಿಸಿದ್ದಾರೆ. ಚಿತ್ರ ನೋಡಿದ ನಂತರ ಮಾತನಾಡಿದ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಿತ್ರ ಬಹಳ ಇಷ್ಟವಾಯ್ತು ಎಂದು ಮಿಲನಾ ನಾಗರಾಜ್, ಚಿತ್ರದಲ್ಲಿ ತಮಗೆ ಇಷ್ಟವಾಗಿದ್ದು ಏನು ಎಂದು ವಿವರಿಸಿದರು. ‘‘ಸಿನಿಮಾಗಳಲ್ಲಿ ಫ್ರೆಶ್ ಕಾಂಬಿನೇಷನ್ ಇದ್ದರೆ ಅದು ಫ್ರೆಶ್ ಅನ್ನಿಸತ್ತೆ. ಅದೇ ರೀತಿ ಅಜಯ್ ರಾವ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಇಷ್ಟವಾಯ್ತು’’ ಎಂದಿದ್ದಾರೆ ಮಿಲನಾ ನಾಗರಾಜ್. ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್ ಬಹಳ ಅನಿರೀಕ್ಷಿತವಾಗಿತ್ತು ಎಂದಿರುವ ಮಿಲನಾ, ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಚಿತ್ರದ ಕತೆ ನೋಡಿಸಿಕೊಂಡು ಹೋಗುವಂತಿದೆ ಎಂದ ಮಿಲನಾ, ತಂತ್ರಜ್ಞರ ಶ್ರಮವನ್ನು ಶ್ಲಾಘಿಸಿದರು.

ಡಾರ್ಲಿಂಗ್ ಕೃಷ್ಣ ಮಾತನಾಡಿ, ಇಡೀ ಸಿನಿಮಾ ಫ್ಯಾಮಿಲಿ ಎಂಟರ್​ಟೈನರ್ ಆಗಿದೆ. ಅಜಯ್ ಅವರ ಪಾತ್ರ ಪೋಷಣೆ ಬಹಳ ಇಷ್ಟವಾಯ್ತು ಎಂದಿದ್ಧಾರೆ. ಅಲ್ಲದೇ ಸಸ್ಪೆನ್ಸ್ ಸಿನಿಮಾವಾಗಿರೋದರಿಂದ ಹೆಚ್ಚೇನೂ ಹೇಳುವುದಿಲ್ಲ, ಎಲ್ಲರೂ ಚಿತ್ರ ನೋಡಿ ಎಂದಿದ್ದಾರೆ ಕೃಷ್ಣ. ಮಿಲನಾ ಹಾಗೂ ಕೃಷ್ಣ ಅವರು ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಹೇಳಲು ಮರೆಯಲಿಲ್ಲ. ಎಲ್ಲಾ ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ ಎಂದು ಇದೇ ವೇಳೆ ಅವರು ಕೇಳಿಕೊಂಡರು.

ಡಾರ್ಲಿಂಗ್ ಕೃಷ್ಣ ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

‘ಲವ್​ ಮಾಕ್ಟೇಲ್​ 2’ ಸಿನಿಮಾ ರಿಲೀಸ್​ ಯಾವಾಗ? ವಿಶೇಷ ದಿನಾಂಕದ ಮೇಲೆ ಅಭಿಮಾನಿಗಳ ನಿರೀಕ್ಷೆ

ಹಿಂದಿಯಲ್ಲಿ ‘ಕೆಜಿಎಫ್​’ ವರ್ಸಸ್​ ‘ಪುಷ್ಪ’; ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಗೆದ್ದಿದ್ದು ಯಾರು?

Published on: Dec 30, 2021 09:58 AM