‘ಫಾರ್ ರಿಜಿಸ್ಟ್ರೇಷನ್’ ಹೊಸ ಹಾಡು ನೀರಿನೊಳಗೆ ಚಿತ್ರೀಕರಣ ಕಷ್ಟ-ಸುಖ ಹೇಳಿಕೊಂಡ ಮಿಲನಾ
ಮಿಲನಾ ನಾಗರಾಜ್

‘ಫಾರ್ ರಿಜಿಸ್ಟ್ರೇಷನ್’ ಹೊಸ ಹಾಡು ನೀರಿನೊಳಗೆ ಚಿತ್ರೀಕರಣ ಕಷ್ಟ-ಸುಖ ಹೇಳಿಕೊಂಡ ಮಿಲನಾ

|

Updated on: Feb 04, 2024 | 11:31 PM

For Registration: ಮಿಲನಾ ನಾಗರಾಜ್-ಪೃಥ್ವಿ ಅಂಬರ್ ನಟನೆಯ ‘ಫಾರ್ ರೆಜಿಸ್ಟ್ರೇಷನ್’ ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಹಾಡಿಗೆ ಮಾಡಿದ ಚಿತ್ರೀಕರಣದ ಅನುಭವವನ್ನು ಮಿಲನಾ ಹೇಳಿಕೊಂಡಿದ್ದಾರೆ.

ಮಿಲನಾ ನಾಗರಾಜ್ (Milana Nagaraj), ಪೃಥ್ವಿ ಅಂಬರ್ ನಟಿಸಿರುವ ‘ಫಾರ್ ರೆಜಿಸ್ಟ್ರೇಷನ್’ ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಹಾಡನ್ನು ನೀರಿನಾಳದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಹಾಡಿನ ಚಿತ್ರೀಕರಣಕ್ಕಾಗಿ ನಟರು, ತಂತ್ರಜ್ಞರು ಪಟ್ಟ ಶ್ರಮವನ್ನು ಚಿತ್ರತಂಡದ ಹಲವರು ಮಾಧ್ಯಮಗಳ ಮುಂದೆ ಹಂಚಿಕೊಂಡರು. ನಟಿ ಮಿಲನಾ ಮಾತನಾಡಿ, ‘ನಾನು ನನ್ನ ವೃತ್ತಿ ಜೀವನದಲ್ಲಿ ಈ ವರೆಗೆ ಬಹಳ ಕಷ್ಟಪಟ್ಟಿರುವ ಸಾಂಗ್ ಎಂದರೆ ಇದೇ. ಸುಮಾರು ಹತ್ತು ಗಂಟೆ ಕಾಲ ನೀರಿನಾಳದಲ್ಲಿ ಶೂಟಿಂಗ್ ಮಾಡಿದ್ದೀವಿ. ನನಗೆ ಉದ್ದದ ಡ್ರೆಸ್ ಬೇರೆ ಕೊಟ್ಟಿದ್ದರು, ಚಳಿ ಬೇರೆ ನನ್ನಿಂದ ತಡೆಯಲು ಆಗುತ್ತಿರಲಿಲ್ಲ. ಮನೆಗೆ ಹೋಗಿ ಬಹಳ ಬೈದುಕೊಳ್ಳುತ್ತಿದ್ದೆ ನಾನು. ಆರಂಭದಲ್ಲಿ ಇದ್ದ ಉತ್ಸಾಹ ಕೇವಲ ಎರಡು ಗಂಟೆಯಲ್ಲಿ ಖಾಲಿಯಾಗಿ. ಮೊದಲು ಈ ಶೂಟಿಂಗ್ ಮುಗಿದರೆ ಸಾಕು ಅನ್ನಿಸಿತ್ತು’ ಎಂದರು ಮಿಲನಾ ನಾಗರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ