Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಲ್ಟಿಯಾದ ಲಿಕ್ಕರ್ ವ್ಯಾನ್, ಆ ಮೇಲೆ ಏನಾಯಿತು ಎಂದು ನೀವೇ ಈ ವಿಡಿಯೋದಲ್ಲಿ ನೋಡಿ!

ಪಲ್ಟಿಯಾದ ಲಿಕ್ಕರ್ ವ್ಯಾನ್, ಆ ಮೇಲೆ ಏನಾಯಿತು ಎಂದು ನೀವೇ ಈ ವಿಡಿಯೋದಲ್ಲಿ ನೋಡಿ!

ಸಾಧು ಶ್ರೀನಾಥ್​
|

Updated on: Aug 10, 2023 | 4:56 PM

Kakinada: ಕಾಕಿನಾಡ ಜಿಲ್ಲೆ ತುಣಿ ಮಂಡಲದ ಗವರಯ್ಯ ಕೋನೇರು ಬಳಿ ಮದ್ಯದ ಬಾಟಲಿ ತುಂಬಿದ್ದ ಮಿನಿ ವ್ಯಾನ್ ಪಲ್ಟಿಯಾಗಿದೆ.. ಈ ಘಟನೆಯಲ್ಲಿ ಕೆಲ ಬಾಟಲಿಗಳು ಚಿಂದಿಯಾಗಿವೆ. ಇನ್ನು ಕೆಲವು ಹಾಗೆಯೇ ಕೆಳಗೆ ಬಿದ್ದಿವೆ. ಇನ್ನು ಕೆಳಗೆ ಬಿದ್ದ ಮದ್ಯದ ಬಾಟಲಿಗಳಿಗಾಗಿ ಜನ ಅಬ್ಬಾ ಛಾನ್ಸ್ ಸಿಕ್ತು ಅಂತಾ ಕೈಗೆ ಸಿಕ್ಕಿದಷ್ಟು ಬಾಟಲ್ ಎತ್ತಿಕೊಂಡರು.

ಸ್ವತಃ ತಾನೇ ಎಣ್ಣೆ ಕುಡಿದಂತೆ ಮದ್ಯದ ಲೋಡ್‌ ತುಂಬಿಸಿಕೊಂಡಿದ್ದ ಆ ಮಿನಿ ವ್ಯಾನ್ (mini van) ಭರೋ ಅಂತಾ ಹೋಗುತ್ತಿತ್ತು. ಬಿಯರ್, ಬ್ರಾಂಡಿ, ವಿಸ್ಕಿ ಮತ್ತು ವೈನ್ ಎಲ್ಲವೂ ಆ ಬಾಟಲಿಗಳಲ್ಲಿ ತುಂಬಿತ್ತು. ಆದರೆ ಓಲಾಡುತ್ತಿದ್ದ ಆ ವಾಹನ ಇದ್ದಕ್ಕಿದ್ದಂತೆ ಅಪಘಾತಕ್ಕೀಡಾಯಿತು. ಎಲ್ಲವೂ ರಸ್ತೆಗೆ ಮುಗುಚಿ ಬಿತ್ತು. ಆಗ ಜಮಾಯಿಸಿದರು ನೋಡಿ ಸ್ಥಳೀಯರು (localites). ಆ ವ್ಯಾನಿನಲ್ಲಿ ಯಾರಾದರೂ ಇದ್ದಾರಾ? ಅವರು ಅಪಘಾತದಿಂದ ಗಾಯಗೊಂಡರಾ? ಅಥವಾ ಇನ್ನೂ ಏನಾದರೂ ಹೆಚ್ಚುಕಮ್ಮಿಯಾಯಿತಾ? ಅಂತೆಲ್ಲಾ ಅವರು ಏನೂ ನೋಡಲಿಲ್ಲ. ಅಲ್ಲಿಂದಲ್ಲೇ ಎಣ್ಣೆ ಬಾಟಲಿಗಳನ್ನು (Liquor) ರಾಜಾರೋಷವಾಗಿ ತೆಗೆದುಕೊಂಡು ಹೋದರು. ಕೆಲವರು ಚೀಲಗಳೊಂದಿಗೆ ಬಂದು ತುಂಬಿ ಕೊಂಡು ಹೋದರು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ನಿಯಂತ್ರಿಸಿದರು. ನಂತರ ಸಂಚಾರ ಮುಕ್ತಗೊಳಿಸಲಾಯಿತು. ಮೇಲಿನ ಈ ವೀಡಿಯೊ ವೀಕ್ಷಿಸಿ.

ಕಾಕಿನಾಡ (Kakinada) ಜಿಲ್ಲೆ ತುಣಿ ಮಂಡಲದ ಗವರಯ್ಯ ಕೋನೇರು ಬಳಿ ಮದ್ಯದ ಬಾಟಲಿ ತುಂಬಿದ್ದ ಮಿನಿ ವ್ಯಾನ್ ಪಲ್ಟಿಯಾಗಿದೆ.. ಈ ಘಟನೆಯಲ್ಲಿ ಕೆಲ ಬಾಟಲಿಗಳು ಚಿಂದಿಯಾಗಿವೆ. ಇನ್ನು ಕೆಲವು ಹಾಗೆಯೇ ಕೆಳಗೆ ಬಿದ್ದಿವೆ. ಹೌದು ರಸ್ತೆಯಲ್ಲಿ ಎಣ್ಣೇ ಬಾಟಲಿಗಳು ಕಂಡು ಬಂದಿದ್ದು ಹೀಗೆ. ಬಿದ್ದ ಮದ್ಯದ ಬಾಟಲಿಗಳಿಗಾಗಿ ಜನ ಒಬ್ಬರ ಮೇಲೆ ಮತ್ತೊಬ್ಬರು ಹಾರಿದರು. ಅಬ್ಬಾ ಛಾನ್ಸ್ ಸಿಕ್ತು ಎಂದುಕೊಂಡು ಕೈಗೆ ಸಿಕ್ಕಿದಷ್ಟು ಬಾಟಲ್ ಗಳನ್ನು ಎತ್ತಿಕೊಂಡರು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿ ಅವರು ಸ್ಥಳಕ್ಕೆ ಬಂದಿದ್ದಾರೆ.. ಸ್ಥಳಕ್ಕಾಗಮಿಸಿದ ಗಸ್ತು ಪೊಲೀಸ್ ಸಿಬ್ಬಂದಿ ಸ್ಥಳೀಯರು ಮದ್ಯದ ಬಾಟಲಿಗಳ ಸಾಗಿಸುವುದನ್ನು ತಡೆದಿದ್ದಾರೆ. ಅಲ್ಲಿಗೂ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ