ಗಣೇಶನನ್ನು ಪ್ರತಿಷ್ಠಾಪಿಸಿದ ಪೆಂಡಾಲ್ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಂತರದ ಕೆಲ ಕ್ಷಣಗಳಲ್ಲಿ ಯಂತ್ರೀಕೃತ ಮಾದರಿ ಜೀವ ತುಂಬಿಕೊಂಡು ಟೇಕಾಫ್ ಪ್ರಕ್ರಿಯೆಯನ್ನು ಬಿಂಬಿಸುವ ಹಾಗೆ ತನ್ನ ಹಿಂಭಾಗದಿಂದ ಹೊಗೆಯುಗುಳುತ್ತಾ ಮೇಲಕ್ಕೆ ಚಲಿಸಲಾರಂಭಿಸುತ್ತದೆ- ನಿಸ್ಸಂದೇಹವಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸುವ ದೃಶ್ಯ ಇದು!
ಬೆಂಗಳೂರು: ಚಂದ್ರಯಾನ-3 (Chandrayaan-3) ವಿಕ್ರಮ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಿದ ಇಸ್ರೋ ವಿಜ್ಞಾನಿಗಳ (ISRO scientists) ಯಶಸ್ಸನ್ನು ಕೊಂಡಾಡುವ ಹಾಗೂ ಭಕ್ತಿ ಮತ್ತು ವಿಜ್ಞಾನದ ಅಪೂರ್ವ ಸಮ್ಮಿಲನವನ್ನು (fusion) ಮೈನವಿರೇಳಿಸುವಂತೆ ತೋರಿಸುವ ಒಂದು ವಿನಾಯಕ ಪ್ರತಿಷ್ಠಾಪನೆಯ ಪೆಂಡಾಲ್ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಈಗಾಗಲೇ ವೈರಲ್ ಆಗಿರುವ ಈ ವಿಡಿಯೋನಲ್ಲಿ ಚಂದ್ರಯಾನ-3 ಯಶೋಗಾಥೆಯನ್ನು ವಿವರಿಸುವ ಮಾದರಿಯನ್ನು ಅದ್ಭುತ ಮತ್ತು ನಂಬಲಸದಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ನೋಡುವವರ ಮನಸೂರೆಗೊಳ್ಳುವ ಈ ಕ್ಲಿಪ್ ನಲ್ಲಿ ಚಂದ್ರಯಾನ-3 ಮಾದರಿಯು ಮೊದಲಿಗೆ ನೇರವಾಗಿ ನಿಂತಿರುವ ಮತ್ತು ಚಂದ್ರಯಾನಕ್ಕೆ ತಯಾರಾಗಿರುವ ಸ್ಥಿತಿಯಲ್ಲಿ ಕಾಣಿಸುತ್ತದೆ. ನಂತರದ ಕೆಲ ಕ್ಷಣಗಳಲ್ಲಿ ಯಂತ್ರೀಕೃತ ಮಾದರಿ ಜೀವ ತುಂಬಿಕೊಂಡು ಟೇಕಾಫ್ ಪ್ರಕ್ರಿಯೆಯನ್ನು ಬಿಂಬಿಸುವ ಹಾಗೆ ತನ್ನ ಹಿಂಭಾಗದಿಂದ ಹೊಗೆಯುಗುಳುತ್ತಾ ಮೇಲಕ್ಕೆ ಚಲಿಸಲಾರಂಭಿಸುತ್ತದೆ- ನಿಸ್ಸಂದೇಹವಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸುವ ದೃಶ್ಯ ಇದು!
ಅದರ ಚಮತ್ಕಾರಿಕ ಚಲನೆ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಮಿಶನ್ ನ ಬಹು ಮಹತ್ವಪೂರ್ಣ ಮತ್ತು ಅವಿಭಾಜ್ಯ ಭಾಗವಾಗಿರುವ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನ ಚಿಕ್ಕ ಚಿಕ್ಕ ಪ್ರತಿರೂಪಗಳು ಚಂದ್ರನ ಕಕ್ಷೆ ತಲುಪಿದ ಬಳಿಕ ಮಾಡಿದ ಸಾಹಸಗಳನ್ನು ಕಣ್ಮನ ಸೆಳೆಯುವಂತೆ ಪ್ರದರ್ಶಿಸುತ್ತದೆ. ಚಂದ್ರಯಾನ-3 ಮಿಶನ್ ನ ಈ ಸಂಕೀರ್ಣ ಮಾದರಿಯು ಇಸ್ರೋ ವಿಜ್ಞಾನಿಗಳ ಬುದ್ಧಮತ್ತೆ ಮತ್ತು ಪರಿಶ್ರಮಕ್ಕೆ ಸಲ್ಲುವ ಸೂಕ್ತ ಗೌರವವಾಗಿದೆ.
ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುವ ಪೆಂಡಾಲ್ ನಲ್ಲಿ ಚಂದ್ರಯಾನ-3 ಮಿಶನ್ ವಿವರಿಸುವ ಮಾದರಿಯು ಪ್ರಮುಖ ಆಕರ್ಷಣೆಯಾಗಿದೆ ಮತ್ತು ಭಾರತದ ವೈಜ್ಞಾನಿಕ ಸಾಧನೆ ಹಾಗೂ ಬಾಹ್ಯಾಕಾಶ ಸಂಶೋಧನೆಗಳ ಸಂಕೇತವಾಗಿದೆ. ಗಣೇಶನ ದರ್ಶನಕ್ಕೆ ಬರುವ ಜನ ಈ ಪುಟ್ಟ ಮಾದರಿಯನ್ನು ಕಂಡು ಆಶ್ಚರ್ಯಚಕಿರಾಗುತ್ತಿದ್ದಾರೆ ಅಂತ ಹೇಳಿದರೆ ಅದೊಂದು ಅಂಡರ್ ಸ್ಟೇಟ್ಮೆಂಟ್ ಅನಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ