ತಮ್ಮ ವಿರುದ್ಧ ದೂರು ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನಿಗೆ ಹೆದರಿಸಿದರೇ ಸಚಿವ ಆನಂದ್ ಸಿಂಗ್?
ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಪೋಲಪ್ಪ, ಸಚಿವರು ತಮ್ಮ ಬೆಂಬಲಿಗರೊಂದಿಗೆ ಬಂದು ದೂರು ವಾಪಸ್ಸು ಪಡೆಯುವಂತೆ ತನ್ನನ್ನು ಮತ್ತು ತನ್ನ ಕುಟುಂಬದ ಸದಸ್ಯರನ್ನು ಹೆದರಿಸುತ್ತಿದ್ದಾರೆ ಅಂತ ಹೇಳಿದ್ದಾರೆ.
ಹೊಸಪೇಟೆ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Singh) ಅವರಿಗೆ ಸಂಕಟ ಎದುರಾಗಿದೆ ಮಾರಾಯ್ರೇ. ಸಚಿವರು ರಾಜಕಾಲುವೆಯನ್ನು ಒತ್ತುವರಿ (encroach) ಮಾಡಿಕೊಂಡು ತಮ್ಮ ಬಂಗಲೆ ನಿರ್ಮಿಸಿಕೊಂಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಡಿ ಪೋಲಪ್ಪ (D Polappa) ದೂರು ನೀಡಿದ ಬಳಿಕ ಎಫ್ ಐ ಆರ್ ದಾಖಲಾಗಿದೆ. ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಪೋಲಪ್ಪ, ಸಚಿವರು ತಮ್ಮ ಬೆಂಬಲಿಗರೊಂದಿಗೆ ಬಂದು ದೂರು ವಾಪಸ್ಸು ಪಡೆಯುವಂತೆ ತನ್ನನ್ನು ಮತ್ತು ತನ್ನ ಕುಟುಂಬದ ಸದಸ್ಯರನ್ನು ಹೆದರಿಸುತ್ತಿದ್ದಾರೆ ಅಂತ ಹೇಳಿದ್ದಾರೆ.