ರಾಜಾಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಪರಿಶೀಲನೆಗೆ ಬಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಭೈರತಿ ಬಸವರಾಜ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 4:33 PM

ಕೂಡಲೇ ಅವರು ಫೋನ್​ ಮಾಡಿ  ಅಧಿಕಾರಿಗಳನ್ನು ಒಬ್ಬೊಬ್ಬರಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅವರ ಬೇಜವಾಬ್ದಾರಿತನ ಹೀಗೆಯೇ ಮುಂದುವರಿದರೆ ಮನೆಗೆ ಕಳಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸುತ್ತಿದ್ದಾರೆ.

ಬೆಂಗಳೂರಿನ ರಾಜಾಕಾಲುವೆಯಲ್ಲಿ (SWD) ಮತ್ತೊಬ್ಬ ವ್ಯಕ್ತಿ ಕೊಚ್ಚಿಹೋಗಿರುವ ಘಟನೆ ಶುಕ್ರವಾರ ನಡೆದಿದೆ. ನತದೃಷ್ಟ ಯುವಕನ ಹೆಸರು ಮಿಥುನ್ (Mithun) ಮತ್ತು ಘಟನೆ ನಡೆದಿರುವುದು ಕೆ ಆರ್ ಪುರಂನ ಗಾಯತ್ರಿ ಬಡಾವಣೆಯಲ್ಲಿ. ವಿಷಯ ತಿಳಿದು ನಂತರ ಸ್ಥಳಕ್ಕಾಗಮಿಸಿದ ಸಚಿವ ಬೈರತಿ ಬಸವರಾಜ (Bhyrati Basavaraj) ಅವರಿಗೆ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇಲ್ಲದಿರುವುದು ನಖಶಿಖಾಂತ ಕೋಪ ತರಿಸಿದೆ. ಕೂಡಲೇ ಅವರು ಫೋನ್​ ಮಾಡಿ  ಅಧಿಕಾರಿಗಳನ್ನು ಒಬ್ಬೊಬ್ಬರಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅವರ ಬೇಜವಾಬ್ದಾರಿತನ ಹೀಗೆಯೇ ಮುಂದುವರಿದರೆ ಮನೆಗೆ ಕಳಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.