KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ ಚೆಲುವರಾಯಸ್ವಾಮಿ

| Updated By: ಆಯೇಷಾ ಬಾನು

Updated on: Jun 19, 2024 | 1:50 PM

ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು KRS ನಲ್ಲಿ ನಡೆದ ಸಭೆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ಸಚಿವ ಚೆಲುವರಾಯಸ್ವಾಮಿ ಕಾಮಗಾರಿ ವೀಕ್ಷಿಸಿದರು. 300 ಕೋಟಿಯ ಪ್ರಾಜೆಕ್ಟ್ 24 ಕಿ.ಮೀ ಕಂಪ್ಲೀಟ್ ಆಗಿದೆ. ಚಿಕ್ಕ ಚಿಕ್ಕ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಮಂಡ್ಯ, ಜೂನ್. 19: ಸಚಿವ ಚೆಲುವರಾಯಸ್ವಾಮಿ (Minister Cheluvarayaswamy) ಮತ್ತು ಶಾಸಕರು ನಾಲಾ ಕಾಮಗಾರಿ ವೀಕ್ಷಿಸಿದರು. KRS ನಲ್ಲಿ ನಡೆದ ಸಭೆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ಸಚಿವ ಚೆಲುವರಾಯಸ್ವಾಮಿ ಕಾಮಗಾರಿ ವೀಕ್ಷಿಸಿದರು.

ಇನ್ನು KRS ನಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ನಾಲಾ ಆಧುನೀಕರಣ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತೆ. ರೈತರ ಬೇಡಿಕೆ ಮೇರೆಗೆ ನೀರು ಬಿಡುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತೆ. ನೀರು ಬಿಡುವ ಅವಶ್ಯಕತೆ ಬಂದರೆ ಕೆಲಸದಿಂದ ನೀರು ನಿಲ್ಲಿಸುವಾಗೆ ಆಗಬಾರದು. ಏನೇ ಎಮರ್ಜೆನ್ಸಿ ಕೆಲಸ ಇದ್ರು ಈ ವಾರದಲ್ಲೇ ಮುಗಿಸಿಕೊಳ್ಳಬೇಕು. ನೀರಿನ ಮಟ್ಟ ಹಾಗೂ ಮುಂಗಾರು ನೋಡಿಕೊಂಡು ನೀರು ಬಿಡಬೇಕು. ನಾಲೆಗಳಿಗೆ ನೀರು ಬಿಡುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 46 ಕಿ.ಮೀ ನಾಲೆ ಆಧುನೀಕರಣ ಕಾಮಗಾರಿ ಮಂಜೂರಾಗಿದೆ. 300 ಕೋಟಿಯ ಪ್ರಾಜೆಕ್ಟ್ 24 ಕಿ.ಮೀ ಕಂಪ್ಲೀಟ್ ಆಗಿದೆ. ಚಿಕ್ಕ ಚಿಕ್ಕ ಕೆಲಸ ನಡೆಯುತ್ತಿದೆ ಎಂದರು.

ಇನ್ನ 4 ಕಿ.ಮೀ ಪ್ರೋಗ್ರೆಸ್ ನಲ್ಲಿದೆ, 24 ಕಿ.ಮಿ ಟ್ರಿಮ್ಮಿಂಗ್ ನಡೆಯುತ್ತಿದೆ. ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ನೀರು ನಿಲ್ಲಿಸಿದ ಸಂದರ್ಭದಲ್ಲಿ ಉಪಯೋಗ. ನಾಲಾ ಆಧುನೀಕರಣ ಮಾಡಿದ್ದೇವೆ. 1932ರಲ್ಲಿ ಡ್ಯಾಂ ಕಂಪ್ಲೀಟ್ ಆಗಿದೆ. ಇಲ್ಲಿಯವರೆಗೂ ಮಾಡ್ರನೇಷನ್ ಮಾಡಿಲ್ಲ. ನಮ್ಮ ದುರಾದೃಷ್ಟನೋ, ಟೈಮ್ ಸರಿ ಇಲ್ಲವೋ ಗೊತ್ತಿಲ್ಲ. ಜನರಿಗೆ ತಿಳಿಸೋದರಲ್ಲಿ ಫೇಲ್ ಆಗಿದ್ದೀವೋ ಅಥವಾ ವಿರೋಧ ಪಕ್ಷದವರು ನಮ್ಮನ್ನ ಟೀಕೆ ಮಾಡೋದ್ರಲ್ಲಿ ಸಕ್ಸಸ್ ಆಗಿದ್ದಾರೋ ಗೊತ್ತಿಲ್ಲ. ನಮಗೆ ರಾಜಕಾರಣ ಮುಖ್ಯ ಅಲ್ಲ, ಜಿಲ್ಲೆಯ ಜನರಿಗೆ ಒಳ್ಳೆಯದಾಗಬೇಕು. ಯಾರು ಬೈದುಕೊಂಡರು, ಟೀಕೆ ಮಾಡಿದ್ರು ಗಮನ ಕೊಡಲ್ಲ. ಯಾವ ಕಾಲದಲ್ಲಿ ಏನು ಆಗಬೇಕು ಅದಾಗಬೇಕು, ಇಲ್ಲ ಮುಂದೆ ಸಮಸ್ಯೆ ಎದುರಿಸಬೇಕು. 46 ಕಿ.ಮಿ ಸಕ್ಸಸ್ ಆದ್ರೆ ಮಳವಳ್ಳಿ ಕಡೆ ಭಾಗಕ್ಕೆ ನೀರು ಹೋಗುತ್ತದೆ. ನನಗೆ ಬೇಕಿರುವುದು ಜನರ ಅನುಕೂಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:48 pm, Wed, 19 June 24

Follow us on