Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ

ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ

ಕಿರಣ್ ಹನುಮಂತ್​ ಮಾದಾರ್
|

Updated on:Jun 19, 2024 | 2:47 PM

ವಿಜಯಪುರ(Vijayapur) ಜಿಲ್ಲೆಯಲ್ಲಿ ಕಂಡು ಬಂದ  ಖಗೋಳ ವಿಸ್ಮಯ(Astronomical wonder)ಕ್ಕೆ ಜಿಲ್ಲೆಯ ಜನರು ಬೆರಗಾಗಿದ್ದಾರೆ. ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ ಕಂಡು ಬಂದಿದೆ. ಇದನ್ನು ಗಮನಿಸಿದ ತಿಕೋಟಾ ತಾಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಶಾಲೆಯ ಶಿಕ್ಷಕ ಪರಮೇಶ್ವರ ಎಂಬುವವರು ಖಗೋಳ ವಿಸ್ಮಯವನ್ನು ಶಾಲಾ ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದ್ದಾರೆ.

ವಿಜಯಪುರ, ಜೂ.19: ನಭೋ ಮಂಡಲದಲ್ಲಿ ವಿಸ್ಮಯವೊಂದು ಗೋಚರವಾಗಿದೆ. ವಿಜಯಪುರ(Vijayapur) ಜಿಲ್ಲೆಯಲ್ಲಿ ಕಂಡು ಬಂದ  ಖಗೋಳ ವಿಸ್ಮಯ(Astronomical wonder)ಕ್ಕೆ ಜಿಲ್ಲೆಯ ಜನರು ಬೆರಗಾಗಿದ್ದಾರೆ. ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ ಕಂಡು ಬಂದಿದೆ. ಇದನ್ನು ಗಮನಿಸಿದ ತಿಕೋಟಾ ತಾಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಶಾಲೆಯ ಶಿಕ್ಷಕ ಪರಮೇಶ್ವರ ಎಂಬುವವರು ಖಗೋಳ ವಿಸ್ಮಯವನ್ನು ಶಾಲಾ ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದ್ದಾರೆ.

ವೈಜ್ಞಾನಿಕ ಹಿನ್ನಲೆ?

ಸೂರ್ಯನ ಸುತ್ತ ತೇಜೋಪುಂಜದಂತೆ ಕಾಣುವ ಈ ಉಂಗುರ ನಿರ್ಮಾಣವಾಗಲು ಮುಖ್ಯ ಕಾರಣವೇ ಬೆಳಕಿನ ವಕ್ರೀಭವನ. ಹೌದು, ವಾತಾವರಣದಲ್ಲಿ ಮಂಜಿನ ಹರಳುಗಳ ಮೇಲೆ ಸೂರ್ಯ ಬಿದ್ದಾಗ ಕಿರಣಗಳು ವಕ್ರೀಭವನ ಹೊಂದಿ ಬಾಗುತ್ತವೆ. ಈ ವೇಳೆ ಬೆಳಕಿನ ಏಳು ಬಣ್ಣಗಳು ಹೊರಹೊಮ್ಮುತ್ತದೆ. ಇದು ಅತಿ ಸೂಕ್ಷ್ಮ ಸ್ವರೂಪದ ಮೋಡಗಳ ಇರುವಿಕೆಯಿಂದ ನೋಡುಗರ ಕಣ್ಣುಗಳಿಗೆ ಉಂಗುರದಂತೆ ಗೋಚರಿಸುತ್ತದೆ.

ಈ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ನಿವೃತ್ತ ಕೃಷಿ ಹವಾಮಾನ ತಜ್ಞ ಡಾ ಎಚ್ ವೆಂಕಟೇಶ್, ‘ ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸೂರ್ಯನಿಂದ ಬರುವ ಪ್ರಕಾಶಮಾನ ಕಿರಣಗಳಿಂದ ಉಂಟಾಗುತ್ತದೆ. ಭೂಮಂಡಳದಿಂದ ಎತ್ತರದಲ್ಲಿರೋ ತೆಳುವಾದ ಮೋಡದಲ್ಲಿ ಸೂರ್ಯನ ಕಿರಣಗಳು ಹಾಯ್ದು ಬಂದಾಗ ಉಂಟಾಗೋ ಪ್ರಕ್ರಿಯೆ ಇದಾಗಿದೆ. ಈ ತೆಳು ಮೋಡಗಳನ್ನು ( Cirrus Clouds ) ಎಂದು ಕರೆಯಲಾಗುತ್ತದೆ. ವಾತಾವರಣದಲ್ಲಿ ತಿಳಿ ಮೋಡ 12 ರಿಂದ 15 ಕಿಲೋ ಮೀಟರ್ ಎತ್ತರದಲ್ಲಿರುತ್ತದೆ. ಅಲ್ಲಿ ವಕ್ರೀಭವಣ ( ರಿಪ್ರ್ಯಾಕ್ಷನ್ ) ಆಗಿ ಸೂರ್ಯನ ಸುತ್ತಲೂ ಈ ರೀತಿಯ ವೃತ್ತ ಕಾಣುತ್ತದೆ. ಕೆಲಕ್ಷಣ ಕಂಡು ಇದು ನಂತರ ಮಾಯವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇಂಗ್ಲೀಷ್ ನಲ್ಲಿ Halo ಎಂದು ಕರೆಯುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 19, 2024 02:43 PM