ಇತಿಹಾಸವನ್ನು ತಿರುಚಿ ಹೇಳುತ್ತಿರುವ ಸಿಟಿ ರವಿ ತಿಳಿಗೇಡಿಯಾದರೆ ಸಚಿವ ಸಿಎನ್ ಅಶ್ವಥ್ ನಾರಾಯಣ ಒಬ್ಬ ಮೂರ್ಖ: ಪ್ರೊ  ಪಿವಿ ನಂಜರಾಜ ಅರಸು

Arun Kumar Belly

|

Updated on:Mar 15, 2023 | 6:43 PM

ಅಶ್ವಥ್ ನಾರಾಯಣ ಒಬ್ಬ ತಿಳಿಗೇಡಿ ಮತ್ತು ಮೂರ್ಖ ಅಂತ ಹೇಳದೆ ವಿಧಿಯಿಲ್ಲ, ಸಚಿವರು ಒಕ್ಕಲಿಗ ಸಮುದಾಯಕ್ಕೆ ಮತ್ತು ಪಕ್ಷಕ್ಕೆ ಅವಮಾನ ಮಾಡುತ್ತಿದ್ದಾರೆ, ಇದು ಬಹಳ ವಿಷಾದಕರ ಸಂಗತಿ ಎಂದು ಪ್ರೊಫೆಸರ್ ಹೇಳಿದರು

ಮೈಸೂರು: ಹಿರಿಯ ಮತ್ತು ವಿಖ್ಯಾತ ಇತಿಹಾಸಜ್ಞ ಪ್ರೊ ಪಿವಿ ನಂಜರಾಜ ಅರಸು (Prof PV Nanjaraj Urs) ಅವರಿಗೆ ಇತಿಹಾಸದ ಬಗ್ಗೆ ಇರುವ ಜ್ಞಾನ ಅದಮ್ಯ ಮತ್ತು ಪ್ರಶ್ನಾತೀತ. ಮೈಸೂರಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ಬಿಜೆಪಿ ನಾಯಕರಾದ ಸಿಟಿ ರವಿ (CT Ravi) ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರಿಗೆ ಇತಿಹಾಸದ ಗಂಧವೇ ಇಲ್ಲ, ಕಾಲ್ಪನಿಕ ಹೆಸರುಗಳನ್ನು ಸೃಷ್ಟಿಸಿ ಅವರು ಟಿಪ್ಪು ಸುಲ್ತಾನನ್ನು ಕೊಂದು ಹಾಕಿದರು ಎಂಬ ಹಸಿಸುಳ್ಳುಗಳನ್ನು ಹಬ್ಬುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವಥ್ ನಾರಾಯಣ ಒಬ್ಬ ತಿಳಿಗೇಡಿ ಮತ್ತು ಮೂರ್ಖ ಅಂತ ಹೇಳದೆ ವಿಧಿಯಿಲ್ಲ ಎಂದು ಅರಸ್ ಹೇಳಿದರು. ಸಚಿವರು ಒಕ್ಕಲಿಗ ಸಮುದಾಯಕ್ಕೆ ಮತ್ತು ಪಕ್ಷಕ್ಕೆ ಅವಮಾನ ಮಾಡುತ್ತಿದ್ದಾರೆ, ಬಹಳ ವಿಷಾದಕರ ಸಂಗತಿ ಇದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada