ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್

Edited By:

Updated on: Oct 13, 2024 | 8:12 AM

ತುಮಕೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್ ಅವರು ಕಾಣದಂತೆ ಮಾಯವಾದನು ನಮ್ಮ ಶಿವ, ಕೈಲಾಸ ಸೇರಿಕೊಂಡನು ಎಂದು ಪುನೀತ್ ರಾಜ್​ಕುಮಾರ್ ಅವರ ಹಾಡನ್ನು ಹಾಡಿದರು. ಗಾಯಕ ವಿಜಯಪ್ರಕಾಶ್ ಹಾಡನ್ನು ಹಾಡುವಾಗ ಅಭಿಮಾನಿಗಳು ಒತ್ತಾಯಿಸಿದ್ದು ಒತ್ತಾಯದ ಮೇರೆಗೆ ಗಾಯಕರ ಜೊತೆ ಸಚಿವರು ಧ್ವನಿಗೂಡಿಸಿದರು.

ತುಮಕೂರು, ಅ.13: ತುಮಕೂರು ದಸರಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ತುಮಕೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್ ಅವರು ಕಾಣದಂತೆ ಮಾಯವಾದನು ನಮ್ಮ ಶಿವ, ಕೈಲಾಸ ಸೇರಿಕೊಂಡನು ಎಂದು ಪುನೀತ್ ರಾಜ್​ಕುಮಾರ್ ಅವರ ಹಾಡನ್ನು ಹಾಡಿದರು.

ಗಾಯಕ ವಿಜಯಪ್ರಕಾಶ್ ಹಾಡನ್ನು ಹಾಡುವಾಗ ಅಭಿಮಾನಿಗಳು ಒತ್ತಾಯಿಸಿದ್ದು ಒತ್ತಾಯದ ಮೇರೆಗೆ ಗಾಯಕರ ಜೊತೆ ಸಚಿವರು ಧ್ವನಿಗೂಡಿಸಿದರು. ಇದೇ ಮೊದಲ ಬಾರಿ ಜಿಲ್ಲಾಡಳಿತದಿಂದ ತುಮಕೂರು ದಸರಾ ಆಚರಣೆ ಮಾಡಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ