ಸಚಿವ ಸ್ಥಾನ ಬಿಟ್ಟುಕೊಡ್ತೀನಿ ಎಂದು ಪುನರುಚ್ಚರಿಸಿದ ಕೆ ಎಚ್ ಮುನಿಯಪ್ಪ, ಉಳಿದ ಸಚಿವರಲ್ಲಿ ತಳಮಳ, ಕಾಂಗ್ರೆಸ್‌ನಲ್ಲಿ ಕೋಲಾಹಲ!
ಹಿರಿಯ ಸಚಿವ ಮುನಿಯಪ್ಪನವರ ಈ ಹೇಳಿಕೆ, ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅದ್ರಲ್ಲೂ ಸಿದ್ದರಾಮಯ್ಯ ಸಂಪುಟದ ಸಚಿವರಲ್ಲಿ ತಳಮಳ ಶುರುವಾಗಿದೆ. ಮುನಿಯಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಚಿವ ಆರ್‌ಬಿ ತಿಮ್ಮಾಪುರ್, ಇದು ಅವರ ವೈಯಕ್ತಿಕ ಹೇಳಿಕೆ. ಪಕ್ಷ, ಸರ್ಕಾರ, ಕೆಪಿಸಿಸಿ, ಎಐಸಿಸಿ (AICC, KPCC) ಹೇಳಿಕೆ ಅಲ್ಲ ಎಂದಿದ್ದಾರೆ. ಮುನಿಯಪ್ಪ, ಪಕ್ಷಕ್ಕಾಗಿ ತ್ಯಾಗ ಮಾಡುವ ವಿಚಾರದಲ್ಲಿ ನಾನು ಸದಾ ಮುಂದೆ ಇರ್ತೀನಿ ಎಂದಿದ್ದಾರೆ. ಆ ಮೂಲಕ ಇತರೆ ಹಿರಿಯ ನಾಯಕರೂ ಪಕ್ಷಕ್ಕಾಗಿ ತ್ಯಾಗ ಮಾಡಬೇಕು ಅಂತಾ ಪರೋಕ್ಷವಾಗಿ ಹೇಳಿದ್ದಾರೆ.
ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಆಹಾರ ಸಚಿವ ಕೆ ಎಚ್ ಮುನಿಯಪ್ಪ (Minister KH Muniyappa) ಹೇಳಿಕೆ ಕಾಂಗ್ರೆಸ್‌ನಲ್ಲಿ (Congress) ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಅಧಿಕಾರ ಹಂಚಿಕೆ, ಕುರ್ಚಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮುನಿಯಪ್ಪ ಹೇಳಿದಂತೆ ನಡೆದ್ರೆ ಎರಡೂವರೆ ವರ್ಷದ ಬಳಿಕ ಸಚಿವರು ಮಾತ್ರ ಬದಲಾಗ್ತಾರಾ? ಅಥವಾ ಸಚಿವರ ಜೊತೆಗೆ ಸಿಎಂ, ಡಿಸಿಎಂ ಸ್ಥಾನಗಳೂ ಕೂಡ ಬದಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಚಿವ ಮುನಿಯಪ್ಪ, ಸಿಎಂ, ಡಿಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದುಬಿಟ್ಟಿದ್ದಾರೆ.
ಹಿರಿಯ ಸಚಿವ ಮುನಿಯಪ್ಪನವರ ಈ ಹೇಳಿಕೆ, ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅದ್ರಲ್ಲೂ ಸಿದ್ದರಾಮಯ್ಯ ಸಂಪುಟದ ಸಚಿವರಲ್ಲಿ ತಳಮಳ ಶುರುವಾಗಿದೆ. ಮುನಿಯಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಚಿವ ಆರ್‌ಬಿ ತಿಮ್ಮಾಪುರ್, ಇದು ಅವರ ವೈಯಕ್ತಿಕ ಹೇಳಿಕೆ. ಪಕ್ಷ, ಸರ್ಕಾರ, ಕೆಪಿಸಿಸಿ, ಎಐಸಿಸಿ (AICC, KPCC) ಹೇಳಿಕೆ ಅಲ್ಲ ಎಂದಿದ್ದಾರೆ.
ಮುನಿಯಪ್ಪ, ಪಕ್ಷಕ್ಕಾಗಿ ತ್ಯಾಗ ಮಾಡುವ ವಿಚಾರದಲ್ಲಿ ನಾನು ಸದಾ ಮುಂದೆ ಇರ್ತೀನಿ ಎಂದಿದ್ದಾರೆ. ಆ ಮೂಲಕ ಇತರೆ ಹಿರಿಯ ನಾಯಕರೂ ಪಕ್ಷಕ್ಕಾಗಿ ತ್ಯಾಗ ಮಾಡಬೇಕು ಅಂತಾ ಪರೋಕ್ಷವಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ